SURYAGAGANA I ಕೆಲವರ ವಿರೋಧಗಳ ನಡುವೆಯೂ I ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ I ಸೌಗಂಧಿಕ ನೇಮಕ ಬಹುತೇಕ ಖಚಿತ..!
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸ್ಥಾನಕ್ಕೆಈಗ ಬಾರಿ ಪೈಪೋಟಿ ನೆಡೆಯುತ್ತಿದೆ.
ಈ ಪೈಪೋಟಿಯಲ್ಲಿ ಮುಖ್ಯ ವಾಗಿ ಇಬ್ಬರ ಹೆಸರು ಕೇಳಿ ಬರುತ್ತಿದೆ ಒಂದು ಸೌಗಂಧಿಕ,ಮತ್ತೊಂದು
ವಿಜಯಲಕ್ಷಿ ಪಾಟೀಲ್ ಆದರೆ ಇಬ್ಬರ ನಡುವೆ ಪೈಪೋಟಿ ಇದ್ದರೂ ಸಹ ರಾಜ್ಯ ಮಟ್ಟದಲ್ಲಿ ಸೌಗಂಧಿಕ ಹೆಸರು ಅಂತಿಮಘಟ್ಟದಲ್ಲಿದೆ. ಆದರೆ ಇವರಿಗೆ ಅದ್ಯಕ್ಷೆ ಸ್ಥಾನ ತಪ್ಪಿಸಲು ಹಲವರು ಸಂಚು ನೆಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಕೆಲವರು
ಸೌಗಂಧಿಕ ಅವರ ವಿರುದ್ದ ರಾಜ್ಯ ನಾಯಕರಲ್ಲಿ ಅಪಪ್ರಚಾರದಲ್ಲಿ ತೊಡಗಿದ್ದಾರೆ.
ಸೌಗಂಧಿಕ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ತನ್ನದೇ ಆದ ರೀತಿಯಲ್ಲಿ ಕ್ರಿಯಾಶೀಲ ವಾಗಿ ಕೆಲಸ ಮಾಡಿದ್ದಾರೆ.ಕೊರೋನ ಸಂದರ್ಭದಲ್ಲಿ ಅವರ ಕೆಲಸ ಅದ್ವಿತೀಯ ವಾದುದು.ಮಹಿಳೆಯರನ್ನ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಕೆಲವರು ಸುಖಾ ಸುಮ್ಮನೆ ಇವರ ಮೇಲೆ ಸಲ್ಲದ ಆರೋಪ ಹೊರಿಸುತ್ತಿದ್ದಾರೆ.ಇಷ್ಟು ದಿನ ಇವರೆಲ್ಲಿ ಹೋಗಿದ್ದರು.
ಹಾಲಿ ಅಧ್ಯಕ್ಷೆ ಅನಿತಾ ಕುಮಾರಿಯವರ ಅಧ್ಯಕ್ಷಾವಧಿ 6 ವರ್ಷ ಆಗಿರುವ ಹಿನ್ನೆಲೆಯಲ್ಲಿ ಹೊಸ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದ್ದೇ ತಡ ಶಿವಮೊಗ್ಗದ ಮಹಿಳಾ ಕಾಂಗ್ರೆಸ್ಸಿಗರಲ್ಲಿಯೂ ಲಾಬಿ ಶುರುವಾಗಿದೆ.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ, ಸಂಘಟಕಿ ಶ್ರೀಮತಿ ಅನಿತಾ ಕುಮಾರಿಯವರು ಆರು ವರ್ಷಗಳ ಕಾಲ ಶಿವಮೊಗ್ಗ ಜಿಲ್ಲಾ ಮಹಿಳಾ ಅಧ್ಯಕ್ಷ ಸ್ಥಾನದಲ್ಲಿದ್ದರು. ಇವರಿಗಿಂತ ಹಿಂದೆ ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ, ಸಂಘಟಕಿ ವಿಜಯಲಕ್ಷ್ಮೀ ಪಾಟೀಲರು ಅಧ್ಯಕ್ಷರಾಗಿದ್ದರು. ಸುಮಾರು 14 ವರ್ಷಗಳಷ್ಟು ದೀರ್ಘ ಕಾಲ ಮಹಿಳಾ ಅಧ್ಯಕ್ಷೆ ಆಗಿದ್ದವರು ಶ್ರೀಮತಿ ವಿಜಯಲಕ್ಷ್ಮೀ ಪಾಟೀಲ್.
ಈಗ ಮತ್ತೆ ವಿಜಯಲಕ್ಷ್ಮಿ ಪಾಟೀಲರು ಅಧ್ಯಕ್ಷರಾಗಲು ಲಾಬಿ ನಡೆಸುತ್ತಿದ್ದಾರೆ.
ಸೌಗಂಧಿಕಾ ರಘುನಾಥ್ ಪಕ್ಷಕ್ಕೆ ತನ್ನದೇ ಆದ ಕೊಡುಗೆ ನೀಡಿರುವುದಂತೂ ನಿಜ.ಹಾಗೆ ನೋಡಿದರೆ ವಿಜಯಲಕ್ಷ್ಮಿ ಪಾಟೀಲ್ ಈಗಾಗಲೇ ಈ ಸ್ಥಾನವನ್ನು
ಅಲಂಕರಿಸುದ್ದಾರೆ.ಹಾಗಾಗಿ ಸೌಗಂಧಿಕ ಅವರಿಗೆ ಜಿಲ್ಲಾದ್ಯಕ್ಷೆ ಪಟ್ಟ ನೀಡುವುದು ಸಾಮಾಜಿಕ ನ್ಯಾಯ ಕೂಡ ಆಗಿದೆ. ಸೌಗಂಧಿಕಾರವರ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ನಿಜಕ್ಕು ವೈಷಮ್ಯದ ದ್ವೇಷದ ಆರೋಪವೇ ಹೊರತು
ಸತ್ಯವಲ್ಲ.ಹಾಗಾಗಿ ಜಿಲ್ಲಾಮಂತ್ರಿಗಳು
ಮತ್ತು ರಾಜ್ಯ ನಾಯಕರು ವಿನಾಕಾರಣ ಈ ಅಪಪ್ರಚಾರಕ್ಕೆ ಕಿವಿಗೊಡ ಬಾರದು ಎಂಬುದು
ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರ ಹಾಗು ಕಾರ್ಯಕರ್ತರ ಆಗ್ರಹವಾಗಿದೆ
Comments
Post a Comment