ಸೂರ್ಯಗಗನ I ಹೀಗೊಂದು ಲೇಖಕಿ ರಶ್ಮಿ ಶಮಂತ್ ಅವರ ಪದ್ಯ I


ಸ್ತ್ರೀ

ದುಡಿವಳು ಅವನಿಗೆ ಸಮನಾಗಿ
ಆದರೂ ಸಬಲೆಯಲ್ಲ
ಕುಟುಂಬದ ಸೌಖ್ಯಕಾಗಿ 
ತ್ಯಜಿಸುವಳು ತನ್ನ ಸುಖವ
ಆದರೂ ಗಣನೆಗಿಲ್ಲ
ತಾಳ್ಮೆ ಸಹನೆಯ ರೂಪವೆಂಬರು 
ಹಾಗಾಗಿ ಅವಳೇನೂ ಅಲ್ಲ

ಅವಳ ಹೋರಾಟ
ಬಸಿರು ,ಬಾಣಂತನ , ಋತುಮತಿ
ಋತುಬಂಧ, ಮಾಸಿಕ ಯಾತನೆಗಳೆಂಬ
ದೇಹದ ಒಳಗಿನ ನೋವಿನೊಂದಿಗೆ
ವರದಕ್ಷಿಣೆ,ಲೈಂಗಿಕ ಕಿರುಕುಳ, ಅತ್ಯಾಚಾರಗಳೆಂಬ
ಮಾನಸಿಕ ತಳಮಳಗಳೊಂದಿಗೆ

ಅವಳ ಕನಸು 
ತನ್ನದಲ್ಲದ ಕನಸುಗಳಿಗಾಗಿ 
ಅವಳ ಹೋರಾಟ
ಕೊನೆಯಲ್ಲಿ ಹಣೆಪಟ್ಟಿಯಷ್ಟೇ
ಪುರುಷನ ಸಾಧನೆಗೆ ಬೆಂಬಲವೆಂಬುದು
ಅವಳದೆಂಬುದು ಏನೂ ಇಲ್ಲ

ಸ್ರ್ತೀ ಎಂಬುವವಳು 
ಏನೂ ಅಲ್ಲದೆಯೇ
ಎಲ್ಲವೂ ಆಗಬಲ್ಲ ಶಕ್ತಿ
ಅವಳಲ್ಲಿರಲಿ ಭಕ್ತಿ 
ಬೇಡ ಯಾವುದೇ ತಾತ್ಸಾರ
ಅವಳಾಗಬಲ್ಲಳು ಸಾಧನೆಯ ಆಗರ

ಪದ್ಯ ಬರೆದವರು -ರಶ್ಮಿ ಶಮಂತ್

ಇಂತಿವರ ಕುರಿತು : ರಶ್ಮಿ ಶಮಂತ್ ಬಹುಮುಖಿ ಬರಹಗಾರ್ತಿ, ಹವ್ಯಾಸಕ್ಕೆ ಬರೆಯಲೊರಟವರು ಇದೀಗ ಲೇಖಕಿಯಾಗಿ ಬದಲುಗೊಂಡಿದ್ದಾರೆ, ಅವರ ಸಾಲುಗಳು ವಾಸ್ತವ ಮಜಲುಗಳ ಸಾರುತ್ತದೆ, ಅರ್ಥಾಥ್ಯವನ್ನು ಕಟ್ಟಿಕೊಡುತ್ತದೆ, ಮಲೆನಾಡಿನ ಲೇಖಕಿಯರ ಸಾಲಿನಲಿ ರಶ್ಮಿ ಶಮಂತ್ ಕೂಡ ಒಬ್ಬರು, ನಿಮ್ಮ ಬರಹದ ಪಯಣ ಇನ್ನಷ್ಟು ವೃದ್ದಿಯಾಗಲಿ ಸಾರಸ್ವತಾ ಲೋಕದಲ್ಲಿ ಮೊಹರೊತ್ತಲಿ ಎನ್ನುವುದು ಹಾರೈಕೆ.  
               -ಗಾರಾ.ಶ್ರೀನಿವಾಸ್

Comments