I ಸೂರ್ಯಗಗನ I ಗೋಪಾಳದ ಡಿವಿಜಿ ವೃತ್ತದಲ್ಲಿದ್ದ ಗ್ರಾಮಠಾಣಾ ಜಮೀನು I ಕಬಳಿಕೆ I ವಶಕ್ಕೆ ಪಡೆಯಲು ಜಿಲ್ಲಾಧಿಕಾರಿಗಳಿಗೆ I ಕುಳುವ ಯುವಸೇನೆ ಆಗ್ರಹ I


I ಸೂರ್ಯಗಗನ I  ಗೋಪಾಳದ ಡಿವಿಜಿ ವೃತ್ತದಲ್ಲಿದ್ದ ಗ್ರಾಮಠಾಣಾ ಜಮೀನು I ಕಬಳಿಕೆ ವಶಕ್ಕೆ ಪಡೆಯಲು ಜಿಲ್ಲಾಧಿಕಾರಿಗಳಿಗೆ I ಕುಳುವ ಯುವಸೇನೆ ಆಗ್ರಹ I 
   ಶಿವಮೊಗ್ಗ : ತಾಲ್ಲೂಕಿನ ಅಂದಿನ ಗೋಪಾಳ ಗ್ರಾಮದ ಗಾಡಿಕೊಪ್ಪ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ  ಗ್ರಾಮದಲ್ಲಿನ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಾಗಿದ್ದ ಗ್ರಾಮ ಠಾಣಾ ಜಮೀನು ಇದೀಗ ಮಹಾನಗರ ಪಾಲಿಕೆಯಲ್ಲಿದ್ದ ಜಮೀನಿಗೆ ಪೋರ್ಜರಿ ದಾಖಲಾತಿಗಳನ್ನು ಸೃಷ್ಠಿಸಿ ಭೂ ಕಬಳಿಕೆಯಾಗಿದ್ದು ಸದರಿ ಜಮೀನು ಗುರುತಿಸಿ ವಶಕ್ಕೆ ಪಡೆಯಬೇಕು, ಹಾಗೂ ಭೂ ಕಬಳಿಕೆಯ ಜಾಲದಲ್ಲಿದ್ದವರ ಮೇಲೆ ಗುಂಡಾಕಾಯ್ದೆಯಡಿ ಕೇಸು ದಾಖಲಿಸಿ, ನಕಲಿ ದಾಖಲೆಗಳ ಮೂಲಕ ಸಕ್ಷಮ ಪ್ರಾಧಿಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ವಂಚಿಸಿ ಭೂ ಕಬಳಿಕೆ ಮಾಡಲು ಶಾಮೀಲು ಆಗಿರುವ ತಾಲ್ಲೂಕ್ ಅಧಿಕಾರಿಗಳಾದ ಪಂಚಾಯ್ತಿ ಪಿಡಿಓ, ಗ್ರಾಮ ಲೆಕ್ಕಿಗ, ರಜಸ್ವ ನೀರೀಕ್ಷಕ, ತಹಶಿಲ್ದಾರ್, ಸೇರಿದಂತೆ ಟಿಪ್ಪಣಿ ಹಾಗೂ ಮೂಲ ಗ್ರಾಮ ನಕ್ಷೆಯನ್ನು ಅನುಸರಿಸದೆ ಓರಲ್ ಭೂ ಸರ್ವೇ ನಕ್ಷೆ ತಯಾರಿಸಿ ಕೊಟ್ಟಿರುವ ಸರ್ವೇ ಅಧಿಕಾರಿಗಳನ್ನು ಈ ಕೂಡಲೇ ಅಮಾನತ್ತುಗೊಳಪಡಿಸಬೇಕೆಂದು ಕೋರಿ ಜಿಲ್ಲಾಧಿಕಾರಿಗಳವರಿಗೆ, ಸಿದ್ದರಾಮಯ್ಯನವರು, ಮುಖ್ಯಮಂತ್ರಿಗಳಿಗೆ, ಮಧು ಬಂಗಾರಪ್ಪನವರು, ಉಸ್ತುವಾರಿ ಮಂತ್ರಿಗಳು ಅವರಿಗೆ,
  ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಚೆನ್ನಬಸಪ್ಪನವರು, ಉಪವಿಭಾಗಾಧಿಕಾರಿಗಳವರಿಗೆ, 
ತಹಶಿಲ್ದಾರ್ ರವರಿಗೆ ಕುಳುವ ಯುವಸೇನೆ ಮನವಿ ಅರ್ಪಿಸಿ ತನಿಖೆಗೆ ಆಗ್ರಹಿಸಿದೆ,
ವಿಷಯ ೧ರಲ್ಲಿ ಪ್ರಸ್ತಾಪಿಸಿದಂತೆ ಸದರಿ ಗ್ರಾಮ ಠಾಣಾ ಜಮೀನು ( ಇದೀಗಲು ಮೂಲ ಗ್ರಾಮ ನಕ್ಷೆನಲ್ಲಿ ನಮೂದಿಸಿರುವಂತೆ ಯಥಾಸ್ಥಿತಿ ಇರುವ ಸೆಟ್ಲೆಮೆಂಟ್ ಅಂದಾಜು ೨ಎಕರೆ ಭೂ ಪ್ರದೇಶ ) ಭೂ ಕಬಳಿಕೆಯಾದಂತೆ ಇದಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ ೧ರಲ್ಲಿನ ೩೮.೦೦ ಗುಂಟೆ ಭೂ ಪ್ರದೇಶಕ್ಕೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಬೇಲಿ ಸುತ್ತಿಕೊಂಡಿರುವುದನ್ನು ಖಂಡಿಸಿ ತಮಗೆ ಈ ಮೂಲಕ ಒತ್ತಾಯಿಸಿ ಈ ಕೂಡಲೇ ಭೂ ಕಬಳಿಕೆದಾರರಿಂದ ವಶಕ್ಕೆ ಪಡೆದು ಕುಳುವ ಯುವ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಮೀಸಲಿರಿಸುವಂತೆ ಮನವಿ ನೀಡಿರುವ ಕುಳುವ ಯುವಸೇನೆಯ ಮನವಿ ಇಂತಿದೆ,
 ಶಿವಮೊಗ್ಗ ತಾಲ್ಲೂಕಿನ ಅಂದಿನ ಗೋಪಾಳ ಗ್ರಾಮದ ಗಾಡಿಕೊಪ್ಪ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ ಒಟ್ಟು ಸುಮಾರು ಎರಡು ಎಕರೆ ಗ್ರಾಮ ಠಾಣಾ ಜಮೀನು ಇದೀಗ ಪೋರ್ಜರಿ ದಾಖಲೆ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ವಂಚಿಸಿ ಭೂ ಕಬಳಿಕೆ ಮಾಡಿಕೊಂಡಿದ್ದು ಸದರಿ ಅಧಿಕಾರದ ದುರುಪಯೋಗಕ್ಕೆ ತುತ್ತಾಗಿರುವ ಇಂತಹ ಮೀಸಲು ಭೂ ಪ್ರದೇಶಗಳು, ಅಕ್ರಮ ಖಾತೆಗಳಿಗೆ, ಭೂ ಸರ್ವೇ ಸ್ಕೆಚ್‌ಗಳಿಗೆ ಒಳಗಾಗುತ್ತಿರುವುದು ಅಲ್ಲದೆ ಡಿ-ನೋಟಿಫಿಕೇಶನ್ ಎನ್ನುವ ಜ್ವಲಂತ ಪಿಡುಗುಗಳಿಗೆ ಕಾರಣವಾಗುತ್ತಿರುವ ಗ್ರಾಮ ಲೆಕ್ಕಿಗ, ರಜಸ್ವ ನೀರೀಕ್ಷಕ, ಸರ್ವೇ ಅಧಿಕಾರಿಗಳನ್ನು ಈ ಕೂಡಲೇ ಅಮಾನತ್ತಿನಲ್ಲಿಟ್ಟು ಮೀಸಲು ಭೂ ಪ್ರದೇಶದಲ್ಲಿ ಅಕ್ರಮವಾಗಿ ಒಳ ಪ್ರವೇಶಿಸಿರುವವರ ಮೇಲೆ ಅಗತ್ಯ ಕಾನೂನು ಕ್ರಮ ಜರುಗಿಸಲು ಆದೇಶಿಸಬೇಕೆಂದು ಈ ಮೂಲಕ ವಿನಂತಿಸುತ್ತೇವೆ ಎಂದು ಕುಳುವ ಯುವಸೇನೆ ತಿಳಿಸಿದೆ

   ಶಿವಮೊಗ್ಗ ನಗರ ಹಾಗೂ ತಾಲ್ಲೂಕಿನಲ್ಲಿ ಹೀಗೊಂದು ಭೂ ಕಬಳಿಕೆಗಳು ಹೆಚ್ಚಾಗಿದ್ದು ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ, ಇದರಿಂದ ಕ್ರೈಂ ಪಟ್ಟಿ ತೆರೆಯ ಮರೆಯಲ್ಲಿಯೇ ಬೆಳೆಯುತ್ತಿರುವುದಕ್ಕೆ ಸಾಕ್ಷೀಯಾಗಿದೆ, ಶಿವಮೊಗ್ಗದ ಭೂಗತ ಪಾತಕಿಗಳಿಗೆ ಇಂತಹ ಪೋರ್ಜರಿಯ ಲ್ಯಾಂಡ್ ಲಿಟಿಗೇಶನ್ ಕೋಟ್ಯಾಂತರ ರೂಪಾಯಿ ಪೂರೈಕೆಯಾಗುತ್ತಿದ್ದು, ಇದರಿಂದ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕ ಉದ್ದೇಶಗಳಿಗೆ ಮೀಸಲು ಕಾಯ್ದೆ ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ
   ಈ ಕೂಡಲೇ ತಮಗೆ ಸಲ್ಲಿಸಿರುವ ಮನವಿ ಪರಾಂಭರಿಸಿ ಸದರಿ ಶಿವಮೊಗ್ಗ ತಾಲ್ಲೂಕಿನ ಅಂದಿನ ಗೋಪಾಳ ಗ್ರಾಮದ ಗಾಡಿಕೊಪ್ಪ ಪಂಚಾಯ್ತಿ ವ್ಯಾಪ್ತಿಯಲ್ಲಿದ್ದ  ಗ್ರಾಮದಲ್ಲಿನ ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಾಗಿದ್ದ ಗ್ರಾಮ ಠಾಣಾ ಜಮೀನು ಗೋಪಾಳದ ಡಿವಿಜಿ ವೃತ್ತದಲ್ಲಿದ್ದು ತಾವುಗಳು ಇಲ್ಲಿಗೆ ಖುದ್ದಾಂ ಬೇಟಿ ನೀಡಿ ಪರಿಶೀಲಿಸಿ ಅಗತ್ಯ ಕಾನೂನು ಕ್ರಮ ಜರುಗಿಸುವಂತೆ ಈ ಮೂಲಕ ತಮಗೆ ಆಗ್ರಹಿಸಿದ್ದಾರೆ,

   ಇದಲ್ಲದೆ ಇದಕ್ಕೆ ಹೊಂದಿಕೊಂಡಂತೆ ಇರುವ  ವಿಷಯ ೧ರಲ್ಲಿ ಪ್ರಸ್ತಾಪಿಸಿದಂತೆ ಸದರಿ ಗ್ರಾಮ ಠಾಣಾ ಜಮೀನು ( ಇದೀಗಲು ಮೂಲ ಗ್ರಾಮ ನಕ್ಷೆನಲ್ಲಿ ನಮೂದಿಸಿರುವಂತೆ ಯಥಾಸ್ಥಿತಿ ಇರುವ ಸೆಟ್ಲೆಮೆಂಟ್ ಅಂದಾಜು ೨ಎಕರೆ ಭೂ ಪ್ರದೇಶ ) ಭೂ ಕಬಳಿಕೆಯಾದಂತೆ ಇದಕ್ಕೆ ಹೊಂದಿಕೊಂಡಿರುವ ಸರ್ವೆ ನಂಬರ್ ೧ರಲ್ಲಿನ ೩೮.೦೦ ಗುಂಟೆ ಭೂ ಪ್ರದೇಶಕ್ಕೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಬೇಲಿ ಸುತ್ತಿಕೊಂಡಿರುವುದನ್ನು ಖಂಡಿಸಿ ತಮಗೆ ಈ ಮೂಲಕ ಒತ್ತಾಯಿಸಿ ಈ ಕೂಡಲೇ ಭೂ ಕಬಳಿಕೆದಾರರಿಂದ ವಶಕ್ಕೆ ಪಡೆದು ಕುಳುವ ಯುವ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಮೀಸಲಿರಿಸುವಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ ಎಂದು ಕುಳುವ ಯುವಸೇನೆಯ ಜಿಲ್ಲಾ ಅಧ್ಯಕ್ಷರಾದ ಲೋಕೇಶ್ ಫೈಲ್ವಾನ್ ತಿಳಿಸಿದ್ದಾರೆ.

Comments