ಸೂರ್ಯಗಗನ I ಆರ್ ಸಿ ಬಿ ಗೆಲುವಿನ ಸಂಭ್ರಮಾಚರಣೆ I ಕಾಲ್ತುಳಿದ ದುರಂತ ಹನ್ನೊಂದು ಸಾವು I ಸಿಬಿಐ ತನಿಖೆಗೆ ಆಗ್ರಹ

ಶಿವಮೊಗ್ಗ :  ಜೂನ್ ೪, ೨೦೨೫ ರಂದು ಬೆಂಗಳೂರು ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಖಅಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತದ ಅನಾಹುತ ದುರಂತ ಸಂಭವಿಸಿ ೧೧ ಜನರು ಮೃತಪಟ್ಟಿದ್ದು, ೫೦ಕ್ಕೂ ಹೆಚ್ಚು ಮಂದಿ ಗಾಯವಾಗಿದೆ ಇದೊಂದು ಮಾನವೀಯ ಬದುಕುಗಳ ಮೇಲಿನ ಅಮಾನವೀಯ ಕೃತ್ಯವಾಗಿದ್ದು ಸದರಿ ಈ ಘಟನೆಯಲ್ಲಿ ರಾಜ್ಯ ಸರ್ಕಾರದ ಆಡಳಿತರೂಢ ವ್ಯವಸ್ಥೆಗಳು ಕಾರಣವಾಗಿದೆ ಎಂದು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ ಹೇಳಿದೆ

     ಅಲ್ಲದೆ ಈ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದ ಡಿಕೆ. ಶಿವಕುಮಾರ್, ಗೃಹಮಂತ್ರಿಗಳಾದ ಪರಮೇಶ್ವರ್‌ರವರುಗಳು ಸೇರಿದಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಸರ್ಕಾರದ ಅಧಿಕಾರಿಗಳು ಹಾಗೂ ಸಚಿವರುಗಳು ನೇರ ಕಾರಣಕರ್ತರಾಗಿರುವುದು, ಸಾಕ್ಷೀಕರಿಸಿರುವುದು ಪ್ರಾಥಮಿಕ ಹಂತದಲ್ಲಿಯೇ ಕಂಡು ಬಂದಿರುವುದರಿಂದ ಇವರುಗಳ ಮೇಲೆ ಪ್ರಥಮ ವರ್ತಮಾನ ವರದಿಯನ್ನು (ಎಫ್‌ಐಆರ್) ನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ
( ಬೆಂಗಳೂರು ನಗರ ) ದಾಖಲಿಸಬೇಕು ಹಾಗೂ ಸದರಿ ಪ್ರಕರಣದ ದುರಂತದ ಸಮಗ್ರ ತನಿಖೆಗೆ  ಸಿಬಿಐ ಗೆ ವಹಿಸಲು ಆದೇಶಿಸಬೇಕೆಂದು ಮಾನವ ಹಕ್ಕುಗಳ ಆಯೋಗಕ್ಕೆ ಹಾಗೂ ಕರ್ನಾಟಕ ರಾಜ್ಯದ ಗೌರವಾನ್ವಿತ ರಾಜ್ಯಪಾಲರಿಗೆ ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೋರಂ, ಒತ್ತಾಯಿಸಿದೆ.

 ಜೂನ್ ೪, ೨೦೨೫ ರಂದು ಬೆಂಗಳೂರು ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಖಅಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಸಂಭ್ರಮಾಚರಣೆ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದ ಡಿಕೆ. ಶಿವಕುಮಾರ್, ಗೃಹಮಂತ್ರಿಗಳಾದ ಪರಮೇಶ್ವರ್‌ರವರುಗಳು ಮುಂದು ನಿಂತು ಕಾರ್ಯಕ್ರಮವನ್ನು ನಡೆಸಿರುವುದು ಪೂರ್ವಯೋಜಿತವಾಗಿದ್ದು ಸದರಿ ಸಂಭ್ರಮಾಚರಣೆಯು ರಾಜಕೀಯ ಉದ್ದೇಶವಿರುವುದು ಪ್ರಚುರತೆ ಪಡೆಯುವ ಉದ್ದೇಶದಿಂದಲೇ ಭಾಗಿಯಾಗಿರುವುದಕ್ಕೆ ಇಂತಿವರುಗಳೇ ಸಾಕ್ಷೀಕರಿಸಿರುವುದು,

   ಸದರಿ ಸರ್ಕಾರದ ಆಡಳಿತರೂಢ ಮಂತ್ರಿಗಳು ಒಂದು ಕಾರ್ಯಕ್ರಮಕ್ಕೆ ಹೀಗೆಯೇ ಅನಾಯಾಸವಾಗಿ ತಲುಪಬಹುದೇ..? ಅವರಿಗೆ ಅಧೀಕೃತ ಪ್ರವಾಸ ಜ್ಞಾಪನ ಪತ್ರದ ಆದೇಶಗಳನ್ವಯವೇ ಆರ್‌ಸಿಬಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ದೃಡಪಡುತ್ತದೆ, ಇಲ್ಲಿ ಇವರುಗಳದ್ದೇನೂ ಪಾತ್ರವಿಲ್ಲ ಎಂದು ಪೊಲೀಸರು ಏಕಾಎಕಿ ತೀರ್ಮಾನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದ ಡಿಕೆ. ಶಿವಕುಮಾರ್, ಗೃಹಮಂತ್ರಿಗಳಾದ ಪರಮೇಶ್ವರ್‌ರವರುನ್ನು ಸಂಪೂರ್ಣವಾಗಿ ಕೈ ಬಿಟ್ಟು, ಈ ಕಾಲ್ತುಳಿತದ ದುರಂತಕ್ಕೆ ಆರ್‌ಸಿಬಿ ಪ್ರಾಂಚೈಸಿ, ಡಿಎನ್‌ಎ ಎಂಟರ್‌ಟೈನ್‌ಮೆಂಟ್ ಪ್ರೈವೆಟ್ ಲಿಮಿಟೆಡ್, ಕೆಎಸ್‌ಸಿಎ ಅಡ್ಮಿನಿಸ್ಟ್ರೇಷನ್ ಕಮಿಟಿಯ ಮೇಲೆ ಕ್ರಮವಾಗಿ ಎ೧, ಎ೨, ಎ೩, ಎಂದು ೫-೦೬-೨೦೨೫ ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಪ್‌ಐಆರ್ ಆಗಿರುವುದು ಭಾರತೀಯ ನಾಗರೀಕ ಸಂಹಿತೆಯ ದುರುಪಯೋಗ ಪಡಿಸಿಕೊಳ್ಳಲಾಗಿದೆ,

    ಸಾಲದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ೧೧ ಜನರ ಪ್ರಾಣವನ್ನು ಬಲಿ ಪಡೆದ ದುರಂತ ಕಾಲ್ತುಳಿತದ ಹಿನ್ನೆಲೆಯಲ್ಲಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತೀ ತ್ವರಿತವಾಗಿ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್, ಬೆಂಗಳೂರು ನಗರ ಪಶ್ಚಿಮದ ಇನ್ಸ್‌ಪೆಕ್ಟರ್ ಜನರಲ್ ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ವಿಕಾಶ್, ಬೆಂಗಳೂರು ನಗರ ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶೇಖರ್ ಎಚ್ ತೆಕ್ಕಣ್ಣವರ್, ಕಬ್ಬನ್ ಪಾರ್ಕ್ ಸಹಾಯಕ ಪೊಲೀಸ್ ಆಯುಕ್ತ ಸಿ ಬಾಲಕೃಷ್ಣ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎ ಕೆ ಗಿರೀಶ್ ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಿರುವುದು ಹಲವು ಅನುಮಾನಕ್ಕೆಡೆ ಮಾಡಿಕೊಟ್ಟಿದೆ,

 ರಾಜಕೀಯ ಪ್ರಚುರತೆಯ ಹಿನ್ನಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಹಾಗೂ ಆಯೋಜನೆಯಲ್ಲಿ ಪಾಲ್ಗೊಂಡು ಈ ಕಾಲ್ತುಳಿತದ ಘಟನೆಯಲ್ಲಿ ಸಾಕ್ಷೀಕರಿಸಿದ್ದಲ್ಲದೆ, ಈ ದುರಂತದಲ್ಲಿ ನಮ್ಮದೇನು ಪಾತ್ರವಿಲ್ಲ ಎಂದರೆ ಸರ್ಕಾರ ನಡೆಸುತ್ತಿರುವುದು, ರಾಜ್ಯದ ಆಡಳಿತಾತ್ಮಕತೆಯ ನಿರ್ವಹಣೆ ಪೊಲೀಸರು ನಡೆಸುತ್ತಿದ್ದಾರೆಯೇ..? ಈ ಕಾರ್ಯಕ್ರಮವನ್ನು ನಡೆಸಲು ಈಗಾಗಲೇ ಅಮಾನತ್ತಾದ ಪೊಲೀಸ್ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಸ್ವತಃ ಮುಂದಾಗಿದ್ದಾರೆಯೇ..? ಅಥವಾ ಆಡಳಿತ ವ್ಯವಸ್ಥೆಗಳ ಅದೇಶಗಳನ್ನು ಪಾಲಿಸಲು ಮುಂದಾಗಿದ್ದರೆ..? ಎನ್ನುವುದು ಉನ್ನತ ಮಟ್ಟದ ತನಿಖೆ ಅಗತ್ಯತೆ ಕಂಡು ಬಂದಿರುವುದರಿಂದ ೧೧ ಜನರ ಸಾವು ಅತೀ ಅಮಾನವೀಯ ಕ್ರೌರ್ಯದ ಪ್ರತೀಕವಾಗಿದ್ದು,,

        ಇದೊಂದು ಧಾರುಣ ಸಾಮಾಜಿಕ ಹತ್ಯೆಗಳು ಆಗಿರುವುದರಿಂದ ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದ ಡಿಕೆ. ಶಿವಕುಮಾರ್, ಗೃಹಮಂತ್ರಿಗಳಾದ ಪರಮೇಶ್ವರ್‌ರವರು ನೇರ ಹೊಣೆಗಾರರಾಗಿರುವುದು ಈ ಘಟನೆಯಿಂದ ದೃಡಪಡುವುದರಿಂದ ಯಾವುದೇ  ಕಾರಣಕ್ಕೂ ಇವರನ್ನು ಪ್ರಕರಣದಿಂದ ಕೈ ಬಿಡದೆ ಈ ಕೂಡಲೇ ಇಂತಿವರುಗಳ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಪ್‌ಐಆರ್ ದಾಖಲಿಸಲು ಹಾಗೂ ಉನ್ನತ ಮಟ್ಟದ ತನಿಖೆಗೆ ?ಸಿಬಿಐ? ಗೆ ವಹಿಸಲು ಆದೇಶಿಸಬೇಕೆಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಹಾಗೂ ಘನ ಗೌರವಾನ್ವಿತ ರಾಜ್ಯ ಪಾಲರಲ್ಲಿ ಮನವಿ ಮಾಡಿಕೊಳ್ಳುತ್ತಾ ಈ ದೂರನ್ನು ದಿ ಗ್ಲೋಬಲ್ ಹ್ಯೂಮನ್ ರೈಟ್ಸ್ ಪೊರಂ ನಿಂದ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದೆ

Comments