SURYAGAGANA I ದಾವಣಗೆರೆಯ ನಟೋರಿಯಸ್ ಕಣುಮ ಸಂತೋಷನ ಬರ್ಬರ ಹತ್ಯೆ
ದಾವಣಗೆರೆ I ನಟೋರಿಯಸ್ ಕಣುಮ ಸಂತೋಷನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಂದು ಸಂಜೆ ಆತನೇ ಕಟ್ಟಿ ಕೊಂಡಿದ್ದ ಕ್ಲಬ್ ನಲ್ಲಿ ಜರುಗಿದೆ
ಕಣುಮ ಸಂತೋಷನ ಹತ್ಯೆಗೆ ಹಳೆಯ ದ್ವೇಷವಿತ್ತು ಈ ಸೇಡಿನ ಹಿನ್ನೆಲೆಯಲ್ಲಿ ಸಂಜೆ ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ
ಮುಂಭಾಗದಲ್ಲಿ ನಡೆದಿದೆ. ಹತ್ಯೆಗೀಡಾದ
ಸಂತೋಷ್ ಆಲಿಯಾಸ್ ಕಣುಮ ಕೆಟಿಜೆ ನಗರದ ನಿವಾಸಿಯಾಗಿದ್ದನು, ಊಟ ಮುಗಿಸಿಕೊಂಡು ತನ್ನ ಕ್ಲಬ್ ಗೆ ಬಂದಿದ್ದಾಗ ಆಟೋದಲ್ಲಿ ಬಂದ ಪಾತಕಿಗಳ ಗುಂಪು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ,
ರೌಡಿ ಬುಳ್‌ನಾಗನ ಹತ್ಯೆಯಲ್ಲಿ ಸಂತೋಷ್ ಆಲಿಯಾಸ್ ಕಣುಮಾನ ಹೆಸರು ಪ್ರಮುಖವಾಗಿತ್ತು. ಈ ಕೊಲೆಯ ಸೇಡಿಗೆ ಕಣುಮನನ್ನ ಹತ್ಯೆಗೈಯಲಾಗಿದೆ ಎಂದು ಪ್ರಾಥಮಿಕ ಹಂತದಲ್ಲಿ ತಿಳಿದು ಬಂದಿದ್ದರು ಪೊಲೀಸರ ತನಿಖೆಯ ನಂತರವೇ ಬಹಿರಂಗವಾಗಬೇಕಿದೆ
Comments
Post a Comment