ಸೂರ್ಯಗಗನ I ಜೆ.ಸಿ.ಐ.ಸಮೃದ್ಧಿ ಘಟಕದಿಂದ I ಪೌರಕಾರ್ಮಿಕರಿಗೆ ಸನ್ಮಾನ
ಶಿವಮೊಗ್ಗ : ಜೆ.ಸಿ.ಐ.ಸಮೃದ್ಧಿ ಘಟಕದಿಂದ ಜೆ. ಸಿ. ನರಸಿಂಹಮೂರ್ತಿ ಅವರ ನೇತೃತ್ವದಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು
ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಪ್ರೊ. ಡಾ. ಆರ್. ಅನುರಾಧ ಪಟೇಲರವರು ಮಾತನಾಡಿ 18 ಹಾಗೂ 19ನೇ ಶತಮಾನದಲ್ಲಿ ಕೈಗಾರಿಕಾ ಕರಣ ಆದಂತಹ ಸಂದರ್ಭದಲ್ಲಿ ಕಾರ್ಮಿಕರು 12 ರಿಂದ 15 ಗಂಟೆಗಳವರೆಗೆ ನಿರಂತರವಾಗಿ ಕೆಲಸ ಮಾಡಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ಅವರಿಗೆ ಯಾವ ಮೂಲಭೂತ ಸೌಕರ್ಯಗಳು ಇರಲಿಲ್ಲ ಇದರ ವಿರುದ್ಧ ಸಂಘಟಿತ ತಾರಾಗಿ ಹೋರಾಟ ಪ್ರಾರಂಭಿಸಿದರು
ಅವರು ಮೇ1 ರಿಂದ ಪ್ರತಿಭಟನೆ ಪ್ರಾರಂಭಿಸಿದ್ದರಿಂದ ಮೇ 1 ರಂದು ಕಾರ್ಮಿಕರ ದಿನಾಚರಣೆ ಎಂದು ಪ್ರಾರಂಭವಾಯಿತು. ಇದರ ಮುಖ್ಯ ಉದ್ದೇಶ 15 ಗಂಟೆಯಿಂದ ಎಂಟು ಗಂಟೆಗಳಿಗೆ ಕೆಲಸಗಳನ್ನು ಸೀಮಿತಗೊಳಿಸುವುದು ಮತ್ತು ಅವರಿಗೆ ವಿಶೇಷವಾಗಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವುದು, ಹಾಗಾಗಿ ಈ ನಿಟ್ಟಿನಲ್ಲಿ ಸರ್ಕಾರ ಕಾರ್ಮಿಕರಿಗೆ ಇನ್ನೂ ಹೆಚ್ಚಿನ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡುವುದು ಅವಶ್ಯಕತೆ ಇದೆ, ಹಾಗೆ ಅವರು ಸ್ವಚ್ಛತಾ ಕಾರ್ಯಕ್ರಮ ಮಾಡುವಂತಹ ಸಂದರ್ಭದಲ್ಲಿ ನಾವುಗಳು ಸಮಾಜದ ಎಲ್ಲಾ ಪ್ರಜೆಗಳು ಪ್ರತಿಯೊಬ್ಬರು ಅವರಿಗೆ ಸಹಕರಿಸುವುದರ ಮೂಲಕ ಸ್ವಚ್ಛ ಭಾರತ ಆಂದೋಲನಕ್ಕೆ ಸಹಕರಿಸಿದಂತಾಗುವುದು, ಎಂದು ಮಾತನಾಡಿದರು,
ಅಧ್ಯಕ್ಷರಾದ ಜೆ ಸಿ. ನರಸಿಂಹಮೂರ್ತಿ ಯವರು ಪೌರಕಾರ್ಮಿಕರಾದ ಲಕ್ಷ್ಮಮ್ಮ, ಅಣ್ಣಪ್ಪ, ವೆಂಕಟೇಶ್ ರವರಿಗೆ ಶಾಲು ಹೊಂದಿಸಿ, ಹಾರ ಹಾಕಿ, ಹಣ್ಣು ಮತ್ತು ಸ್ವೀಟ್ ಕೊಟ್ಟು ಸನ್ಮಾನಿಸಿದರು, ಕಾರ್ಯದರ್ಶಿಯಾದ ಜೆ. ಸಿ.ಗಾಯತ್ರಿ ಯಲ್ಲಪ್ಪಗೌಡರವರು ಎಲ್ಲರನ್ನು ಸ್ವಾಗತಿಸಿದರು, ಜೆ.ಸಿ.ಲೋಲಾ ಅವರು ಎಲ್ಲರಿಗೂ ವಂದನಾರ್ಪಣೆಯನ್ನು ಹೇಳಿದರು, ಈ ಕಾರ್ಯಕ್ರಮಕ್ಕೆ ಜೆ. ಸಿ.ಅಶ್ವಿನಿ ಜೆ.ಸಿ ಸುಮಾ, ಜೆಸಿ ಸರಳ, ಜೆ. ಸಿ ಅನ್ನಪೂರ್ಣ,ರಶ್ಮಿ, ಮುಂತಾದವರು ಭಾಗವಹಿಸಿದ್ದರು.
Comments
Post a Comment