ಶಿವಮೊಗ್ಗದ ವಿನಾಯಕನಗರದ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಭಾರತೀಯ ಸಂಸ್ಕೃತಿ, ಭಕ್ತಿಭಾವನೆ ಮತ್ತು ಶ್ರೀ ರಾಮನ ಹಿರಿಮೆಯನ್ನು ಸಾರುವ ‘ಭಾರತದ ಭಾಗ್ಯ ಶ್ರೀರಾಮ’ ಧ್ವನಿ ಸುರುಳಿಯ ಅನಾವರಣ ಸಮಾರಂಭದಲ್ಲಿ ಭಾಗವಹಿಸಲಾಯಿತು. ಈ ಸ್ಮರಣೀಯ ಘಳಿಗೆಯನ್ನು ವಿಧಾನಪರಿಷತ್ತಿನ ಮಾಜಿ ಸಭಾಪತಿಗಳಾದ ಶ್ರೀಯುತ ಡಿ. ಹೆಚ್. ಶಂಕರಮೂರ್ತಿಯವರು ಧ್ವನಿಸುರಳಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿ ಉದ್ಘಾಟನೆ ನೆರವೇರಿಸಿದರು.
ಈ ಸಂಭ್ರಮದ ಕ್ಷಣಕ್ಕೆ ವಿಧಾನ ಪರಿಷತ್ ಸದಸ್ಯರಾದ ಡಿ ಎಸ್ ಅರುಣ್, ಆರ್ಯವೈಶ್ಯ ಮಹಾಜನ ಸಮಿತಿಯ ಅಧ್ಯಕ್ಷರಾದ ಭೂಪಾಳಂ ಶಶಿಧರ್, ಶ್ರೀನಿಧಿ ಟೆಕ್ಸ್‌ಟೈಲ್ಸ್‌ನ ಅಶ್ವಥ್ ನಾರಾಯಣ ಶೆಟ್ಟಿ, ‘ಭಾರತದ ಭಾಗ್ಯ ಶ್ರೀರಾಮ’ ಗೀತೆಯ ಲೇಖಕರಾದ ಶ್ರೀಮತಿ ಪ್ರತಿಭಾ ಅರುಣ್, ಗಾಯಕರಾದ ಪೃಥ್ವಿ ಗೌಡ ಹಾಗೂ ವಿನಯ್ ಸೇರಿದಂತೆ ಸಮಾಜದ ಹಲವು ಗಣ್ಯರು ಉಪಸ್ಥಿತರಿದ್ದರು.
#JaiSriRam #ChenniBJP
Comments
Post a Comment