I SURYAGAGANA I ಬಸವೇಶ್ವರ ನಗರದ ಮನೆಗೆ ನುಗ್ಗಿ ಹಲ್ಲೆಗೆ ಯತ್ನ I ಪೊಲೀಸರ ಅತಿಥಿಯಾದ ಗಾಂಜಾ ಗಿರಾಕಿ ಕಳ್ಳಿ ಮೋಹನ I
ಶಿವಮೊಗ್ಗ : ಬಸವೇಶ್ವರ ನಗರ, ಕೃಷಿನಗರ, ಫ್ಹೆಬಲ್ ಅಪಾರ್ಟ್ಮೆಂಟ್, ಡಾಲರ್ಸ್ ಕಾಲೋನಿ ನಿವಾಸಿಗಳಿಗೆ ಹೀಗೊಂದು ಭಯಬೀತಿ ಹುಟ್ಟಿಸುತ್ತಿದೆ ಅಲ್ಲದೆ ಅಂಡರ್ ಪಾಸ್ ಹಾಗೂ ರೈಲ್ವೇ ಗೇಟ್ ದಾಟಿ ಬರುವ ಹಾದಿಗಳಲ್ಲಿ ಪಾನಮತ್ತರ ಹಾವಳಿ, ಹಾಗೂ ಬೀಡಾ, ಟೀ ಸ್ಟಾಲ್ ಅಂಗಡಿ ಎದುರಿನ ಪ್ಲೇ ಓವರ್ ಬ್ರಿಡ್ಜ್ ಕಾಂಪೋಂಡ್ ಗಳೀಗ ಸ್ಮೋಕಿಂಗ್ ಜೋನ್ ಆಗಿ ಪರಿವರ್ತನೆಯಾಗಿರುವುದು ಗ್ರಾಮಾಂತರ ಹಾಗೂ ಜಯನಗರ ಪೊಲೀಸರು ಹೆಚ್ಚಿನ ಕೆಲಸ ಮಾಡಬೇಕಿದೆ,
ಇಂತಹದೊಂದು ವಾತಾವರಣ ಸಂಜೆ ಹಾಗೂ ರಾತ್ರಿ ಪಾಳಯಗಳು ಗಾಂಜಾ ಗಿರಾಕಿಗಳ ಹಾಗೂ ಪಾನಮತ್ತರ ಹಾವಳಿಗೆ ಬಂದು ನಿಂತಿದೆ, ಇಂದು ರಾತ್ರಿ ಇದೇ ಹಾವಳಿಯಲ್ಲಿ ಸಮಾ ಗಾಂಜಾ ಸೇವಿಸಿ ಬಂದ ಎನ್ನುವ ಕಳ್ಳಿ ಮಂಜ ಎಂಬಾತ ಇಲ್ಲೇ ಇರುವ ತನು ಜ್ಯೂಸ್ ಸೆಂಟರ್ ಮಾಲೀಕರ ಮನೆಗೆ ಏಕಾಎಕಿ ನುಗ್ಗಿ ಮಹಿಳೆಯರ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಜರುಗಿದೆ,
ಅಷ್ಟರೊಳಗೆ ಪೊಲೀಸರು ಧಾವಿಸಿ ಬಂದು ಆತನನ್ನ ಠಾಣೆಗೆ ಕರೆದೋಯ್ದಿದ್ದಾರೆ, ತನು ಜ್ಯೂಸ್ ಸೆಂಟರ್ ಮಾಲೀಕರು ಪೊಲೀಸ್ ದೂರು ಕೂಡ ಸಲ್ಲಿಸಿದ್ದಾರೆ,.
ಇಂದು ಇವರ ಮನೆಗೆ ನಾಳೆ ಮತ್ತೊಂದು ಮನೆಗೆ ಎಂಬಂತೆ ಇಲ್ಲಿನ ಬಡಾವಣೆಯ ನಿವಾಸಿಗಳು ಈ ಬಗ್ಗೆ ಗಂಬೀರತೆಯಿಂದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಶಾಸಕರ ಗಮನಕ್ಕೆ ತರುವುದು ಒಳಿತು,
ಅಚ್ಚರಿ ಎಂದರೆ ಗ್ರಾಮಾಂತರ ಶಾಸಕರಾದ ಶಾರದ ಪೂರ್ಯನಾಯ್ಕರವರ ಮನೆ ಕಡೆ ತುಸು ಹತ್ತಿರದಲ್ಲಿಯೇ ಪಾನಮತ್ತನೋ, ಗಾಂಜ ಮತ್ತಿನಲ್ಲೋ ತೇಲಾಡುತ್ತಿದ್ದ ಕಳ್ಳಿ ಮಂಜನ ಅವಾಂತರಗಳು ಇದೀಗ ನಡೆದಿದೆ
Comments
Post a Comment