I SURYAGAGANA I ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ I ಕವರಿ ಹಕ್ಕಲು ಒಂಟಿ ಮನೆಯಲ್ಲಿ ವಾಸವಾಗಿದ್ದ ಅಸಹಾಯಕ ಗೋಪಾಲನ ಮೇಲೆ ಮರಣಾಂತಿಕ ಹಲ್ಲೆ I ಕೊಲೆ ಪ್ರಯತ್ನ ಜಿಲ್ಲಾ ರಕ್ಷಣಾಧಿಕಾರಿಗಳು I ಗಂಭೀರವಾಗಿ ಪರಿಗಣಿಸಲಿ I ಲಿಯೋ ಅರೋಜ I
I ತೀರ್ಥಹಳ್ಳಿ ತಾಲೂಕು ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ I ಕವರಿ ಹಕ್ಕಲು ಒಂಟಿ ಮನೆಯಲ್ಲಿ ವಾಸವಾಗಿದ್ದ ಅಸಹಾಯಕ ಗೋಪಾಲನ ಮೇಲೆ ಮರಣಾಂತಿಕ ಹಲ್ಲೆ I ಕೊಲೆ ಪ್ರಯತ್ನ ಜಿಲ್ಲಾ ರಕ್ಷಣಾಧಿಕಾರಿಗಳು I ಗಂಭೀರವಾಗಿ ಪರಿಗಣಿಸಲಿ I ಲಿಯೋ ಅರೋಜ I
ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಭಾಗದಲ್ಲಿ 10 ವರ್ಷಗಳಿಂದ ನಕ್ಸಲ್ ಸಂಘಟನೆಯಿಂದ ಗ್ರಾಮಸ್ಥರು, ರೈತರು ಭಯಭೀತಿಯಲ್ಲಿ ಇದ್ದರು .
ಆದರೆ ಈಗ ನಕ್ಷಲರು ಸಂಪೂರ್ಣವಾಗಿ ಪೊಲೀಸ್ ಇಲಾಖೆಗೆ ,ಸರ್ಕಾರಕ್ಕೆ ಶರಣಾಗಿದ್ದು, ಜನರು ಇನ್ನೇನು ನಿಟ್ಟಿಸಿ ರು ಬಿಟ್ಟು ಭಯದ ವಾತಾವರಣದ ಹೊರಬಂದರು ಎನ್ನುವಷ್ಟರಲ್ಲಿ ಫೆಬ್ರವರಿ 16ರ ತಡರಾತ್ರಿ ಎರಡು ಗಂಟೆಗೆ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಕವರಿ ಹಕ್ಲು ಚಿವುಟ ಮನೆ ಎಂಬ ದಟ್ಟ ಕಾಡಿನಲ್ಲಿ ರೈತರ ಜಮೀನುಂದರಲ್ಲಿ ಒಂಟಿ ಮನೆಯಲ್ಲಿ ಕೂಲಿ ಕೆಲಸಕ್ಕೆ ಎಂದು ವಾಸವಾಗಿದ್ದ ಗೋಪಾಲರ ಮನೆಗೆ ಆಗುಂಬೆ ಬಾರ್ ಅಂಗಡಿಯ ಕ್ಯಾಶರ್ ಮಣಿಕಂಠ ಮತ್ತು ಇತರ ಐದು ಜನ ಏಕಾಏಕಿ ಮಾರಕಾಸ್ತ್ರಗಳೊಂದಿಗೆ ನುಗ್ಗಿ ಗೋಪಾಲನ ಮೇಲೆ ಮರಣಾಂತಿಕ ಹಲ್ಲೆ ಮಾಡಿ ಕೊಲೆ ಪ್ರಯತ್ನ ಮಾಡಿದ್ದಾರೆ .ತಡರಾತ್ರಿ ಗ್ರಾಮಸ್ಥರು ಗೋಪಾಲನ ರಕ್ಷಣೆ ಮಾಡಿ ಪೊಲೀಸ್ರಿಗೆ ಮಾಹಿತಿ ನೀಡಿ ಚಿಕಿತ್ಸೆಗೆ ಸಮೀಪದ ಕೊಪ್ಪ ಆಸ್ಪತ್ರೆಗೆ ದಾಖಲು ಮಾಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ .
ಸುದ್ದಿ ತಿಳಿದ ಆಗುಂಬೆ ಪೊಲೀಸ್ ಠಾಣಾಧಿಕಾರಿ ಪ್ರಕರಣ ವನ್ನು ದಾಖಲು ಮಾಡಿ ಸಿಆರ್ ನಂಬರ್ 15/25 ರಲ್ಲಿ ಎಫ್ಐರ್ ನ್ನು ಐಪಿಸಿ 504 ,324 ,307 ,506 ರೆಡ್ ವಿತ್ 149 ( ಈಗಿನ ಹೊಸ ಬಿ ಎನ್ ಎಸ್ ಎಸ್ ಕಾಯಿದೆ 352.118(1),109,351(3),r/w 190 ) ಮಣಿಕಂಠ ಮತ್ತು ಇತರರು ಐದು ಮಂದಿಯ ಮೇಲೆ ಗಂಭೀರ ಸೆಕ್ಷನ್ ಗಳನ್ನು ದಾಖಲು ಮಾಡಿ ಪ್ರಕರಣವನ್ನು ನ್ಯಾಯಕ್ಕೆ ಸಲ್ಲಿಸಿದ್ದಾರೆ.
ಇಲ್ಲಿ ಗಂಭೀರವಾಗಿ ಗಮನಿಸಬೇಕಾದ ವಿಚಾರ ಆಗುಂಬೆ ಭಾಗದಲ್ಲಿ ಒಂಟಿ ಮನೆಗಳಲ್ಲಿ ಈ ರೀತಿ ತಡರಾತ್ರಿ ಮಾರಕ ಆಯುಧಗಳೊಂದಿಗೆ ನುಗ್ಗಿ, ಕೊಲೆ ಪ್ರಯತ್ನ ಮಾಡಿ ಮರಣಾಂತಿಕ ಹಲ್ಲೆ ನಡೆಸಿ ಗ್ರಾಮದಲ್ಲಿ ಭಯಭೀತಿಗೊಳಿಸಿರುವುದು ಅತ್ಯಂತ ಖಂಡನೀಯ ಮತ್ತು ಗಂಭೀರವಾದ ವಿಚಾರವಾಗಿದೆ. ಆರೋಪಿಗಳು ಯಾವುದೇ ಭಯವಿಲ್ಲದೆ ಪೊಲೀಸರ ಹೆದರಿಕೆ ಇಲ್ಲವೇ ಕಾನೂನು ಮತ್ತು ನ್ಯಾಯ ನ್ಯಾಯಾಲಯದ ಹೆದರಿಕೆ ಇಲ್ಲದೆ ರಾಜ ರೋಷವಾಗಿ ತಿರುಗಾಡುತ್ತಿದ್ದು ರಿಂದ ಗ್ರಾಮಸ್ಥರು ಮತ್ತಷ್ಟು ಭಯಭೀತಿಗೆ ಒಳಗಾಗಿದ್ದಾರೆ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ
.ಗ್ರಾಮೀಣ ಪ್ರದೇಶದಲ್ಲಿ ಒಂಟಿ ಮನೆಯಲ್ಲಿ ವಾಸ ಮಾಡಲು ರೈತರು ಮತ್ತು ಜನರು ಇಂದು ಹೆದರುತ್ತಿರುವ ಸಮಯದಲ್ಲಿ ಈ ಪ್ರಕರಣವು ಮತ್ತಷ್ಟು ಭಯಭೀತಿ ಹುಟ್ಟಿಸಿದೆ .ಜಿಲ್ಲಾ ರಕ್ಷಣಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಿ ಕ್ರಮ ಜರಗಿಸಲಿ ಎಂದು ಗ್ರಾಮಸ್ಥರ ಒತ್ತಾಯವಾಗಿದೆ ಮತ್ತು ಹಲ್ಲೆಗಿಡಾದ ಗೋಪಾಲ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕಾಗಿದೆ .ವರದಿ .ಲಿಯೋ ಅರೋಜ.9448137473..9880123040
Comments
Post a Comment