I ಬರೆಯುತ್ತಾರೆ ಗಾರಾ.ಶ್ರೀನಿವಾಸ್ I
I ಭಾರತದ ಇತಿಹಾಸದಲ್ಲಿ ಮೈಲಿಗಲ್ಲಾಗಲಿದೆ I
I ಮಲೆನಾಡಿನ ದೇಶ್ ನೀಟ್ ಆಕಾಡೆಮಿ I
ಉನ್ನತ ವ್ಯಾಸಾಂಗದ ಹಾದಿ ಬಲು ಕ್ಲಿಷ್ಟಕರ, ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ದೂರದ ಊರುಗಳಿಗೆ ತೆರಳಿ ಕೋಚಿಂಗ್ ಪಡೆಯಲು ಬಹಳಷ್ಟು ಮಾನಸೀಕ ಸಮಸ್ಯೆಗಳು ಈ ಹೊತ್ತಿನ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತಲೆದೋರುತ್ತದೆ, ಮದ್ಯಮ, ಬಡ ಕ್ರಮಾಂಕದ ಬದುಕಿನ ಶ್ರೇಣಿಗಳು ಈ ಬಗ್ಗೆ ಯೋಚಿಸುವುದು ಒಂದು ಅತೀವ ಸವಾಲು ಕೂಡ ಹೌದು, ಉದಾಹರಣೆಗೆ ಆಡು ಮಾತಿನಂತೆ ಮಗು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಪರಿಚಯಸ್ಥರು, ಕೌಟುಂಬಿಕ ವರ್ಗದವರು ಕೇಳುತ್ತಾರೆ ಏನು ಮಗು ಓದಿ ಏನಾಗುತ್ತಿಯಾ..? ಎಂದರೆ ಆ ಮಗು ಡಾಕ್ಟರ್ ಆಗುತ್ತೇನೆ, ಇಂಜೀನಿಯರ್ ಆಗುತ್ತೇನೆ, ಎಂದು ಬಹಳ ಸಲೀಸಾಗಿ ಹೇಳಿ ಬಿಡುತ್ತದೆ, ಆ ಅರಿವಿನ ಎಳೆ ಇಲ್ಲದೆ ಹೇಳಿದ ಮಾತುಗಳು ಮುಂದೆ ನಿಜದ ಬದುಕಿನಲ್ಲಿ ಈಡೇರಿಸುವುದಕ್ಕೆ ಪೋಷಕರಿಗೆ ಸಾದ್ಯವಾಗುತ್ತದೆಯೇ..? ಇದು ಸಾದ್ಯಗೊಳಿಸಲೇ ಬೇಕು ಎನ್ನುವ ಪೋಷಕರು ಯಾವ ವ್ಯವಸ್ಥೆಗಳನ್ನು ಅನುಸರಿಸಬೇಕು,
ಎನ್ನುವ ತುಲನೆಯ ತರ್ಕದಲ್ಲಿಯೇ ಮಗುವಿನ ವ್ಯಾಸಾಂಗದ ಹಾದಿ ಅನೇಕ ತಿರುವು ಪಡೆದುಕೊಂಡಿರುತ್ತದೆ, ಒಂದು ಅಂತಹದೊಂದು ವ್ಯವಸ್ಥೆ ಇದ್ದ ಊರಿನಲ್ಲಿ ಇಲ್ಲದಿರುವುದು, ಬಹಳ ಮುಖ್ಯವಾಗಿ ಉನ್ನತ ವ್ಯಾಸಾಂಗಕ್ಕೆ ಎದುರಿಸಬಹುದಾದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ ಪೂರ್ವ ತಯಾರಿ ಇಲ್ಲದಿರುವುದು, ಪ್ರಾಥಮಿಕ ಹಂತದಿಂದಲೂ ಈ ಕುರಿತಾಗಿ ಜ್ಞಾನದ ಕೊರತೆಗಳು ಒಮ್ಮೆಲೆ ಸಾಗರದಲೆಗಳಂತೆ ಅಪ್ಪಳಿಸಿ ಆತಂಕವನ್ನು ಸೃಷ್ಠಿಸುತ್ತಿರುವುದರಿಂದ, ಮಕ್ಕಳ ಮನಸಿನಲ್ಲಿದ್ದ ವೈದ್ಯಕೀಯ ರಂಗದ ಚಿಂತನೆಗಳು ಬಹುತೇಕ ಸಮಾಧಿಯಾಗುತ್ತದೆ, ಇಂತಹ ವಿದ್ಯಾರ್ಥಿ ಭವಿಷ್ಯಗಳನ್ನು ನಿಜದ ಬದುಕಿನಲ್ಲಿ ದರ್ಶಿಸಿಕೊಂಡಿದ್ದೇವೆ.
ಹೀಗೊಂದು ಟಿಪ್ಪಣಿಯೊಂದನ್ನು ತಮ್ಮ ಮುಂದಡಿಯಿಟ್ಟು, ಚಳುವಳಿಗಳ ನೆಲೆ, ಸಾಹಿತ್ಯ ಸೋಗಡಿನ ಸೆಲೆ, ಹೊಸತೊಂದು ಮೈಲಿಗಲ್ಲು ದಾಖಲಿಸುವುದಕ್ಕೆ ದಾಪುಗಾಲಿಟ್ಟಿದೆ, ಹೌದು ಶೈಕ್ಷಣಿಕ ಕ್ಷೇತ್ರದಲ್ಲಿ ಶಾಲಾ-ಕಾಲೇಜುಗಳ ಸ್ಥಾಪನೆ ಅದರ ನಿರ್ವಹಣೆ ಸಾಮಾನ್ಯ, ಯಾಕೆಂದರೆ ವ್ಯಕ್ತಿ ವಿಕಸನದಂತಹ ಜ್ಞಾನವಿಲ್ಲದೆ ಟ್ರೇಡಿಷನಲ್ ಪರಿಕ್ಷೆಗಳಲ್ಲಿ ಗರಿಷ್ಠ ಅಂಕಗಳು ಪಡೆದಿದ್ದರೂ ಭಾರತದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೊಂದಾದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಕುಸಿದು ಬಿಡುತ್ತಾನೆ ಎಂದರೆ ಕಾರಣವೇನಿರಬಹುದು ಎನ್ನುವುದಕ್ಕೆ ವೈಜ್ಞಾನಿಕ ಸತ್ಯಗಳಿವೆ,
ಓದುವ ಮಕ್ಕಳಲ್ಲಿ ಆತಂಕವೇ ಇಲ್ಲದ ಜ್ಞಾನದ ಸುಂದರತೆಯನ್ನು ಅರಳಿಸಬೇಕಿದೆ, ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಎದುರಿಸಲು ಪೂರ್ವ ಸಿದ್ದತೆಗಳಿಲ್ಲದ ಮಕ್ಕಳಲ್ಲಿ ಧೈರ್ಯವನ್ನು ತುಂಬಿ ತಜ್ಞ್ಯ ಉಪನ್ಯಾಸಕರುಗಳ ತಂಡದಿಂದ ಕಾಲ ಕಾಲಕ್ಕೆ ಸಮರ್ಪಕ ಹಾಗೂ ಸಮಗ್ರ ಬೋಧನೆಗಳ ಅಗತ್ಯತೆಯನ್ನು ನಿರ್ಮಿಸುವುದು, ಹೆಚ್ಚಿನ ಕೋಚಿಂಗ್ ನೆಪದಲ್ಲಿ ದೂರದ ಊರುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಪೋಷಕರ ನಡುವಿನ ಭಾವನೆಗಳ ತೊಳಲಾಟ, ನಿಶ್ಚಿಂತತೆ ಇಲ್ಲದ ವೇದನೆಗಳಿಂದ ಮುಕ್ತಗೊಳಿಸುವುದು, ಅತ್ಯಾಧುನಿಕ ತಂತ್ರಜ್ಞಾನಗಳು ಬದಲುಗೊಂಡಿದ್ದರೂ ಸಹ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಮ್ಯಾನ್ಯುಯಲ್ ಹಾದಿಯಲ್ಲಿಯೇ ಗುರುಕುಲ ಕಲ್ಪನೆಯಡಿ ವಿದ್ಯಾರ್ಥಿಗಳನ್ನು ವೈದ್ಯಕೀಯ ರಂಗದತ್ತ ಕೊಂಡೋಯ್ಯುವ ಕನಸು ಹೊತ್ತಿದ್ದು ರಚನಾತ್ಮಕ ಮನಸಿನ, ಮಲೆನಾಡಿನ ಅವಿನಾಶ್ ಅವರದ್ದಾಗಿದೆ,
ಅವರು ನಿಜಕ್ಕೂ ಒಂದು ಕೆಲಸವನ್ನು ಹೇಗೆ ಅಚ್ಚುಕಟ್ಟಾಗಿ ಕಟ್ಟಬಹುದು ಎಂದು ವಾಸ್ತವವಾಗಿ ಈ ಮಲೆನಾಡಿನ ನಗರಿಯಲ್ಲಿ ತೋರಿಸಿಕೊಟ್ಟಿದ್ದಾರೆ, ಒಂದು ಹೋಟೆಲ್ ಉದ್ಯಮವನ್ನು ಕೂಡ ಹೇಗೆ ಯಶಸ್ಸಿನತ್ತ ಕ್ರಿಯೇಟಿವ್ ಮಾದರಿಯಾಗಿ ಮೇರೆತ್ತರಕ್ಕೆ ತಂದು ರಾಜ್ಯದಲ್ಲಿಯೇ ಐಕಾನ್ ಉದ್ಯಮಿಯಾಗಿ ಗುರುತಿಸಿಕೊಂಡಿರುವುದು ಮಲೆನಾಡಿನ ನೆಲಕ್ಕೆ ಗೌರವವೇ ಆಗಿದೆ, ಅವರೊಬ್ಬ ಉಪನ್ಯಾಸಕರು ಆಗಿರುವುದರಿಂದ ಅವರಲ್ಲಿ ವಿಶೇಷ, ಅದ್ಬುತ ಶಿಕ್ಷಣ ಕಲ್ಪನೆಯೊಂದು ಕನಸಿನ ತೊಟ್ಟಿಲಾಗಿ ತೂಗುವುದಕ್ಕೆ ಶುರುವಿಟ್ಟಿತು,
ಏನೇ ಆಗಲಿ ಶಿಕ್ಷಣ ರಂಗದಲ್ಲಿ ಅನೇಕ ಬದಲಾವಣೆಗಳ ನಡುವೆ ಉನ್ನತ ವ್ಯಾಸಾಂಗಕ್ಕೆ ಸೇತುವೆಯೊಂದನ್ನು ನಿರ್ಮಿಸಬೇಕೆಂದು ಆತ್ಮಶಪಥ ಶಾಶ್ವತ ವಾದಂತೆಯೇ ಉನ್ನತ ವ್ಯಾಸಾಂಗದ ಕನಸುಗಳ ಹೊತ್ತಿರುವ ಅನೇಕ ವಿದ್ಯಾರ್ಥಿಗಳ ಭವಿಷ್ಯವನ್ನು ಸಾಕಾರಗೊಳಿಸಲು ಹೊರ ಊರುಗಳ ಬ್ರಾಂಡ್ ಅಕಾಡೆಮಿ ಕೋಚಿಂಗ್‌ಗಳಿಗಿಂತಲೂ ಭಾರತದ ಪೂರ್ವ ಪರಂಪರೆಗೆ ಅನುಗುಣವಾಗಿ ವೈದ್ಯಕೀಯರಂಗಕ್ಕೆ ಪ್ರವೇಶ ಪಡೆಯಲು ನೆನೆಗುದಿಗೆ ಬಿದ್ದಿದ್ದ ಎಜ್ಯುಕೇಷನಲ್ ಪ್ರಾಜೆಕ್ಟ್ ನಡುವೆ ಬ್ರಿಡ್ಜ್ ದ ಗ್ಯಾಪ್ ನಿರ್ಮಿಸಿರುವ ಹೆಗ್ಗಳಿಕೆಗೆ ದೇಶ್ ನೀಟ್ ಅಕಾಡೆಮಿ ( ದಕ್ಷಾಸ್ ಎಜ್ಯುಕೇಷನಲ್ ಸರ್ವೀಸಸ್ ಹಾಲಿಸ್ಟಿಕ್ ) ತನ್ನದೇ ಆಖಾಡವನ್ನು ಸೃಷ್ಟಿಸಿಕೊಂಡಿದೆ.
ಇದೊಂದು ಮಲೆನಾಡಿಗೆ ಹೆಮ್ಮೆಯೇ ಹೌದು. ಇಂತಹದೊಂದು ವಿಶೇಷ ಕಲ್ಪನೆಗೆ ಮೊದಲ ಹೆಜ್ಜೆಯಲ್ಲಿಯೇ ಜೊತೆಯಾದವರು ಮತ್ತೊಬ್ಬ ಆಧ್ಯಾಪಕೀಯ ಕೃಷಿಕ ರಾಕೇಶ್ ಡಿಸೋಜ ಹಾಗೂ ವೃತ್ತಿಪರ ಶಿಕ್ಷಕರ ತಂಡ ಇಲ್ಲೊಂದು ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದಿರುವುದು ವಿಶೇಷವಾಗಿದೆ, ಯಾಕೆ ಶಿಕ್ಷಣ ಕ್ರಾಂತಿ ಎಂದರೆ ಸಾಮಾನ್ಯವಾದದ್ದು ಸಾಮಾನ್ಯವೇ ಆಗಿರುತ್ತದೆ,
ಅದೊಂದು ಅಸಾಧಾರಣ, ಅಸಾಮಾನ್ಯ ರೂಪು ಪಡೆದರೆ ಅದುವೇ ಕ್ರಾಂತಿ ಅಲ್ಲವೇ.. ಹಾಗೆಯೇ ಮಲೆನಾಡಿಗೊಂದು ಶಾಶ್ವತವಾದ ಶಾಸನವನ್ನು ಬರೆಯಲೊರಟಿರುವ ಅವಿನಾಶ್ ಎ.ಆರ್‌ರವರು ಪ್ರಯತ್ನ ನಿಜಕ್ಕೂ ಕೈಗೂಡಲಿದೆ, ಯಾವುದೇ ಸಂದರ್ಭದ ಸಾಂದರ್ಭಿಕತೆ ಎದುರಾದರೂ ಸರಿ ಆ ಸವಾಲುಗಳ ನಡುವೆಯೇ ಯಾವುದೇ ಗ್ರೇಡ್ ವಿದ್ಯಾರ್ಥಿಗಳನ್ನು ವೈದ್ಯಕೀಯ ಪ್ರವೇಶ ಸಿಗಲೇಬೇಕು ಅಂತಹದೊಂದು ಮಾದರಿ ಶಿಕ್ಷಣ, ಕೋಚಿಂಗ್ ವಾತಾವರಣ, ಊಟ, ವಸತಿಗಳನ್ನು ನೀಡಲಾಗಿದೆ ಎಂದು ದೇಶ್ ನೀಟ್ ಅಕಾಡೆಮಿ ತನ್ನ ಪ್ರಭುತ್ವವನ್ನು ಸಾಧಿಸಿದೆ.
Comments
Post a Comment