ಸೂರ್ಯಗಗನ I ಜೋಪಡಿ ನಿವಾಸಿಗಳ ಜೊತೆಯಲ್ಲಿ ಉಸ್ತುವಾರಿ ಸಚಿವರ ಹುಟ್ಟು ಹಬ್ಬ ಆಚರಣೆ I

ಸೂರ್ಯಗಗನ I ಜೋಪಡಿ ನಿವಾಸಿಗಳ ಜೊತೆಯಲ್ಲಿ ಉಸ್ತುವಾರಿ ಸಚಿವರ ಹುಟ್ಟು ಹಬ್ಬ ಆಚರಣೆ I
ತೀರ್ಥಹಳ್ಳಿ :  ಕುರುವಳ್ಳಿ ಜೋಪಡಿ ನಿವಾಸಿಗಗಳ ಜೊತೆಯಲ್ಲಿ ರಾಜ್ಯ ಶಿಕ್ಷಣ ಸಚಿವರು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮಧು ಬಂಗಾರಪ್ಪ ಅವರ ಜನ್ಮ ದಿನಾಚರಣೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರಹಮಾತ್ ಉಲ್ಲಾ ಅಸಾದಿ ಉಪಾಧ್ಯಕ್ಷರಾದ ಗೀತಾ ರಮೇಶ್ ಹಾಗೂ ಸ್ಥಳೀಯ ಪಟ್ಟಣ ಪಂಚಾಯತ್ ಸದಸ್ಯರಾದ ಮಂಜುಳನಾಗೇಂದ್ರ ಜೆಸಿ ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯರಾದ ಕುರುವಳ್ಳಿ ನಾಗರಾಜ್ ಸಾರಥ್ಯದಲ್ಲಿ ಆಚರಿಸಲಾಯಿತು 

 ಜೋಪಡಿ ನಿವಾಸಿಗಳಿಗೆ ಈಗಾಗಲೇ ಬುಕ್ಲಾಪುರ ಗ್ರಾಮದಲ್ಲಿ ಗುರುತಿಸಿರುವ ಜಾಗದ ಕಾರ್ಯ ಚಟುವಟಿಕೆ ಬಗ್ಗೆ ಮತ್ತು ಮಾನ್ಯ ಸಚಿವರು ಹಾಗೂ ಸ್ಥಳೀಯ ತೀರ್ಥಹಳ್ಳಿ ಮುಖಂಡರುಗಳಾದ ಕಿಮ್ಮನೆ ರತ್ನಾಕರ್ ಹಾಗೂ ಡಾ.ಆರ್.ಎಂ ಮಂಜುನಾಥ್ ಗೌಡ್ರು ಕಾಳಜಿಯಿಂದ ಕೆಲಸದ ಹಂತದ ಮಾಹಿತಿಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷರು ನೀಡಿದರು ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಿಹಂಚಿ ಮಧು ಬಂಗಾರಪ್ಪನವರಿಗೆ ಇನ್ನೂ ರಾಜಕೀಯದಲ್ಲಿ ಉತ್ತಮ ಭವಿಷ್ಯ ಲಭಿಸಿದೆ ಎಂದು ಭಾಗವಹಿಸಿದ ಎಲ್ಲಾ ಮುಖಂಡರುಗಳು ಹಾರೈಸಿದರು 

 ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಡಾ ಸುಂದರೇಶ್ ಕೆ ಬಿ ಪದ್ಮನಾಭ ಜಿಲ್ಲಾ ಧಾರ್ಮಿಕ ದತ್ತಿ ಸದಸ್ಯರಾದ ವರಲಕ್ಷ್ಮಿ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ  ಸದಸ್ಯರಾದ ಆನಂದ್ ಜೋಪಡಿ ನಿವಾಸಿಗಳ ಪ್ರಮುಖರಾದ ನಾಗರಾಜ್ ದಿವಾಕರ್ ಗಣೇಶ್ ಮತ್ತು ಪ್ರಮುಖರು ಈ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

Comments