ಸೂರ್ಯಗಗನ I ಚಿಕ್ಕಜೋಗಿಹಳ್ಳಿಯ ಮಹಿಳೆಯನ್ನು ಬೆತ್ತಲುಗೊಳಿಸಿ, ಹಲ್ಲೆ I ಕುಳುವ ಯುವಸೇನೆಯಿಂದ ಆರೋಪಿ ಅರುಣ್ ಬಂಧನಕ್ಕೆ ಆಗ್ರಹ I
ಸೂರ್ಯಗಗನ I ಚಿಕ್ಕಜೋಗಿಹಳ್ಳಿಯ ಮಹಿಳೆಯನ್ನು ಬೆತ್ತಲುಗೊಳಿಸಿ, ಹಲ್ಲೆ I ಕುಳುವ ಯುವಸೇನೆಯಿಂದ ಆರೋಪಿ ಅರುಣ್ ಬಂಧನಕ್ಕೆ ಆಗ್ರಹ I
ಶಿವಮೊಗ್ಗ : ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯ ತೋಟದಲ್ಲಿ ಆಡು ಮೇಯಿಸಿದ ಕಾರಣಕ್ಕೆ ಸರೋಜಮ್ಮ ಎಂಬುವ ಮಹಿಳೆಯನ್ನು ಬೆತ್ತಲೆಗೊಳಿಸಿ, ಹಲ್ಲೆ ನಡೆಸಿ ಪರಾರಿಯಾಗಿರುವ ಅರುಣ್ ಬಿನ್ ಶಿವಕುಮಾರ್ ನನ್ನು ಈ ಕೂಡಲೇ ಮಹಿಳಾ ರಕ್ಷಣಾ ಕಾಯ್ದೆಯನ್ವಯ ಬಂಧಿಸಬೇಕು ಹಾಗೂ ಆತನಿಗೆ ಹಾಗೂ ಆತನ ಕುಟುಂಬಕ್ಕೆ ಸಂಬಂಧಿಸಿದ ಸದರಿ ತೋಟದ ಜಮೀನನ್ನು ಸರ್ಕಾರ ವಶಕ್ಕೆ ಪಡೆದು ದೌರ್ಜನ್ಯಕ್ಕೊಳಗಾದ ಸರೋಜಮ್ಮನ ಕುಟುಂಬಕ್ಕೆ ಆಸ್ತಿ ವರ್ಗಾವಣೆ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ,
ಪರಿಶಿಷ್ಠ ಜಾತಿಯ ಮಹಿಳಾ ಮೇಲಿನ ಹಲ್ಲೆ, ಬೆತ್ತಲುಗೊಳಿಸಿ ದೌರ್ಜನ್ಯ ನಡೆಸಿರುವ ಘಟನೆ ಮನುಷ್ಯ ಜೀವಪರ ನಿಲುವುಗಳಿಗೆ ವಿರೋದವಾಗಿದ್ದು, ಸಾಂವಿಧಾನಿಕ ನಿಯಮಗಳು ಗಟ್ಟಿಯಾಗಿರುವ ಈ ಕಾಲಘಟ್ಟದಲ್ಲಿಯು ಇಂತಹ ಘಟನೆ ಸಾಮಾಜಿಕ ಪಿಡುಗು ಆಗಿದೆ, ಪ್ರಜಾಸತ್ತಾತ್ಮಕವಾದ ಈ ದಿನಮಾನದಲ್ಲಿ ಜಾತಿಯ ಕಾರಣಕ್ಕೆ ನಡೆದಿರುವ ಹಲ್ಲೆ, ಬೆತ್ತಲುಗೊಳಿಸಿ ಹಿಂಸಿಸಿರುವ ಘಟನೆ ಮನುಷ್ಯ ಸಮಾಜ ಕ್ಷಮಿಸುವಂತಹದ್ದಲ್ಲವಾಗಿದೆ ಎಂದು ತಮ್ಮ ಆವಗಾಹನೆಗೆ ತರಬಯಸುತ್ತಾ ಈ ಕೂಡಲೇ ಇಂತಹ ಮನುಷ್ಯ ವಿರೋಧಿ ಜಾತಿಯತೆಯ ವಿಷಜಂತುವನ್ನು ಬಂಧಿಸಬೇಕು ಎಂದು ಈ ಮೂಲಕ ನಮ್ಮ ಕುಳುವ ಯುವಸೇನೆಯು ಆಗ್ರಹಿಸುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಲೋಕೇಶ್ ಫೈಲ್ವಾನ್ ತಿಳಿಸಿದ್ದಾರೆ,
ಘಟನೆಯು ಇಂತಿದೆ : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಚಿಕ್ಕಜೋಗಿಹಳ್ಳಿಯ ತೋಟದಲ್ಲಿ ಆಡು ಮೇಯಿಸಿದ ಕಾರಣಕ್ಕೆ ಸರೋಜಮ್ಮ ಎಂಬುವ ಮಹಿಳೆಯನ್ನು ಬೆತ್ತಲೆಗೊಳಿಸಿ, ಹಲ್ಲೆ ನಡೆಸಿ ಪರಾರಿಯಾಗಿರುವ ಅರುಣ್ ಬಿನ್ ಶಿವಕುಮಾರ್ ನನ್ನು ಈ ಕೂಡಲೇ ಮಹಿಳಾ ರಕ್ಷಣಾ ಕಾಯ್ದೆಯನ್ವಯ ಬಂಧಿಸಬೇಕು ಹಾಗೂ ಆತನಿಗೆ ಹಾಗೂ ಆತನ ಕುಟುಂಬಕ್ಕೆ ಸಂಬಂಧಿಸಿದ ಸದರಿ ತೋಟದ ಜಮೀನನ್ನು ಸರ್ಕಾರ ವಶಕ್ಕೆ ಪಡೆದು ದೌರ್ಜನ್ಯಕ್ಕೊಳಗಾದ ಸರೋಜಮ್ಮನ ಕುಟುಂಬಕ್ಕೆ ಆಸ್ತಿ ವರ್ಗಾವಣೆ ಮಾಡಿ ಶೋಷಿತರ ಕುಟುಂಬಕ್ಕೆ ಸಾಮಾಜಿಕ ನ್ಯಾಯ ಒದಗಿಸಿ ಕೊಡಬೇಕೆಂದು ನಮ್ಮ ಕುಳುವ ಯುವಸೇನೆಯು ತಿಳಿಸಿದೆ,
ಒಂದು ವೇಳೆ ದೌರ್ಜನ್ಯ ನಡೆಸಿ ಪರಾರಿಯಾಗಿರುವ ಅರುಣ್ ಬಿನ್ ಶಿವಕುಮಾರ್ ನನ್ನು ಬಂಧಿಸುವುದಲ್ಲದೆ, ಆತನಿಗೆ ಹಾಗೂ ಆತನ ಕುಟುಂಬಕ್ಕೆ ಸಂಬಂಧಿಸಿದ ಸದರಿ ತೋಟದ ಜಮೀನನ್ನು ಸರ್ಕಾರ ವಶಕ್ಕೆ ಪಡೆದು ದೌರ್ಜನ್ಯಕ್ಕೊಳಗಾದ ಸರೋಜಮ್ಮನ ಕುಟುಂಬಕ್ಕೆ ಆಸ್ತಿ ವರ್ಗಾವಣೆ ಮಾಡಿದಿದ್ದರೆ, ಜಿಲ್ಲಾಡಳಿತದ ವಿರುದ್ದವೇ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಕುಳುವ ಯುವಸೇನೆಯ ಮುಖಂಡರುಗಳಾದ ಚಂದ್ರಪ್ಪ, ನಾಗೇಶ್ , ಶಂಕರ್, ರಾಜೀವ್ , ಶ್ರೀನಿವಾಸ್, ಮನು, ರಜಿನಿ ಸೇರಿದಂತೆ ಮುಂತಾದವರಿದ್ದರು.
Comments
Post a Comment