ಸೂರ್ಯಗಗನ I ಜೆಸಿಐ ಶಿವಮೊಗ್ಗ ಶರಾವತಿಯಿಂದ I ಮೀನು ವ್ಯಾಪಾರಿ ಲೀಲಮ್ಮನವರಿಗೆ ಗೌರವ I
ಶಿವಮೊಗ್ಗ : ನಗರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಬೀದಿ ಬದಿಯ ಮೀನು ಮಾರಾಟ ಹಾಗೂ ಅದರ ಸ್ವಚ್ಚತೆಯ ಕಾಯಕದಲ್ಲಿ ತೊಡಗಿಸಿಕೊಂಡು ತನ್ನ ಬದುಕಿನ ಬಂಡಿ ದೂಡುತ್ತಿರುವ ಲೀಲಮ್ಮ ಹಾಗೂ ಅವರ ತಂಡಕ್ಕೆ ಜೆಸಿಐ ಶಿವಮೊಗ್ಗ ಶರಾವತಿಯಿಂದ ಗೌರವ ಅಭಿನಂದನೆ ಸಲ್ಲಿಸಲಾಯಿತು,
"ಸ್ರೀ ಹೆಜ್ಜೆಗಳೂ" ಎನ್ನುವ ಶೀರ್ಷಿಕೆಯಡಿ ಜೆಸಿಐ ಶಿವಮೊಗ್ಗ ಶರಾವತಿಯಿಂದ ಮಹಿಳೆಯರಿಗಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ಕೆಳಸ್ತರದ ಬದುಕುಗಳಿಗೆ ಗೌರವಿಸಿ ಸನ್ಮಾನಿಸುವುದು ಹಾಗೂ ಅವರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುವುದು, ಅಲ್ಲದೆ ಜೆಸಿಐನಿಂದ ಅವರಿಗೆ ಆತ್ಮ ಸ್ಥೈರ್ಯ ತುಂಬುವುದು ವಿಶೇಷವಾಗಿ ಸ್ತ್ರೀ ಶಕ್ತಿ ಯೋಜನೆಗಳನ್ನು ತಿಳಿಸುವುದು ಇದಾಗಿದೆ,
ಈ ಸಂದರ್ಭದಲ್ಲಿ ಮಾತಾನಾಡಿದ ಪೂರ್ವಾಧ್ಯಕ್ಷೆ ಜೆಸಿ. ಸೌಮ್ಯ ಅರಳಪ್ಪನವರು ಲೀಲಮ್ಮನವರು ಕಳೆದ ಮೂವತ್ತು ವರ್ಷಗಳಿಂದ ಶಿವಮೊಗ್ಗ ನಗರದಲ್ಲಿ ಈ ಮೀನು ಮಾರಾಟ ಹಾಗೂ ಸ್ವಚ್ಚತೆಯ ವ್ಯಾಪಾರ ನಡೆಸುತ್ತಿದ್ದು, ಮೀನು ಖಾದ್ಯಗಳಿಗೆ ಬೇಕಾಗುವ ಅನೇಕ ಬಗೆಯ ಮೀನು ತಳಿಗಳನ್ನು ಗ್ರಾಹಕರಿಗೆ ಒದಗಿಸುವ ಕೆಲಸ ಮಾಡುತ್ತಿದ್ದಾರೆ, ಈ ವೃತ್ತಿಯಿಂದ ತನ್ನ ಸಾಂಸಾರಿಕ ಜೀವನ ಸದೃಡವಾಗಿ ಕಟ್ಟಿಕೊಂಡಿರುವುದು ಸ್ತ್ರೀ ಶಕ್ತಿಯನ್ನು ಇಲ್ಲಿ ಪ್ರಶಂಸಿಸಬೇಕಾಗಿದೆ, ಮಹಿಳಾ ಸಬಲೀಕರಣದ ಆಶಯದಲ್ಲಿ ಇಂತಹ ಶ್ರಮಜೀವಿ ಮಹಿಳೆಯರ ಬದುಕುಗಳನ್ನು ಅನ್ಯರಿಗೆ ಮಾದರಿ ಎಂದರು,
ಮೀನು ಮಾರಾಟಗಾರ್ತಿ ಲೀಲಮ್ಮನವರಿಗೆ ಜೆಸಿಐ ಘಟಕದಿಂದ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಜೆಸಿ.ವಿನೋದ್ ಕುಮಾರ್, ಮಹಿಳಾ ಅಧ್ಯಕ್ಷರಾದ ಜೆಸಿ. ವಾಣಿ ಕಾವಾಡ್, ಕಾರ್ಯದರ್ಶಿ ಜೆಸಿ.ಅಶ್ವಿನಿ ಆನಂದ್, ಸೇರಿದಂತೆ ಪೂರ್ವಾಧ್ಯಕ್ಷರುಗಳಾದ ಜೆಸಿ.ಗಾರಾ.ಶ್ರೀನಿವಾಸ್, ಜೆಸಿ.ಸೌಮ್ಯ ಅರಳಪ್ಪ, ಜೆಸಿ.ಸ್ವಪ್ನ ಸಂತೋಷ್ ಗೌಡ, ಹಾಗೂ ಜೆಸಿ.ಪರಮೇಶ್ವರ್, ಜೆಸಿ.ಚಿರಂಜೀವಿ ಬಾಬುರವರುಗಳು ಉಪಸ್ಥಿತರಿದ್ದರು.
Comments
Post a Comment