I ಬರೆಯುತ್ತಾರೆ ಗಾರಾ.ಶ್ರೀನಿವಾಸ್ Iನಮ್ಮೊಳಗಿನ ಸ್ನೇಹ ಸಾಂಗತ್ಯಕ್ಕೆ ಇಂದಿಗೂ ಬಿರುಕುಗಳಿಲಿಲ್ಲ I

I ಬರೆಯುತ್ತಾರೆ ಗಾರಾ.ಶ್ರೀನಿವಾಸ್ I
ನಮ್ಮೊಳಗಿನ ಸ್ನೇಹ ಸಾಂಗತ್ಯಕ್ಕೆ ಇಂದಿಗೂ ಬಿರುಕುಗಳಿಲಿಲ್ಲ I 

   ಹೌದು ಈ ಮೇಲಿನ ಶೀರ್ಷಿಕೆಗೆ ಹತ್ತಿರವಾದವರು ನಾವು, ಅದೆಂದಿಗೂ ಅಪನಂಬಿಕೆಗಳನ್ನು ಹೊತ್ತು ಸಾಗಲಿಲ್ಲ, ಬಿನ್ನಭಿಪ್ರಾಯ, ಅಸಮಾಧಾನಗಳ ದಿನಮಾನಗಳನ್ನು ಕಳೆದ ಇಪ್ಪತ್ತು ವರುಷಗಳಿಂದ ನೋಡಲೇ ಇಲ್ಲ,  ಅವರು ಅರಣ್ಯ ಇಲಾಖೆಯ ನೌಕರಿಗೆ ಸೇರ್ಪಡೆಯಾಗಿ ಮೊದಲು ಬಳ್ಳಾರಿನಲ್ಲಿ ಕರ್ತವ್ಯಕ್ಕೆ ತೆರಳಿದ ಮೇಲೆ ಪೋನಾಯಿಸಿ ಮಾತಾಡಿಕೊಳ್ಳುತ್ತಿದ್ದೇವು, ಹದನೈದು ದಿನದಲ್ಲಿ ಒಂದೊಮ್ಮೆ ಬೇಟಿಯಾಗುತ್ತಿದ್ದೇವು ಇಲ್ಲದಿದ್ದರೆ ಪೋನಿನ ಸಂಭಾಷಣೆಯಲ್ಲಿಯೇ ಸ್ನೇಹದ ಮಾತು ಮುಂದುವರೆದಿತ್ತು.

    ಏನೇ ಆಗಲಿ ನನಗೆ ಅನಿಸಿದ್ದು ಸ್ನೇಹ ಎಂದರೆ ಹೀಗೆ ಇರಬೇಕು, ಯಾವುದೇ ಲೆಕ್ಕಾಚಾರಗಳಿಲ್ಲ, ಹಪಾಹಪಿತನವಿಲ್ಲ, ಕೆಲವರಂತೆ ಮನೆಹಾಳತನದ ಚರ್ಚೆಯಲ್ಲಿ ನಾವೆಂದಿಗೂ ಕಾಲಹರಣ ಮಾಡಲೇ ಇಲ್ಲ, ಬರೀಯ ನಮ್ಮೊಳಗಿನ ಬದುಕಿನ ವೃದ್ದಿ, ಹೋರಾಟ, ಸಾಮಾಜಿಕ ತುಡಿತಗಳಷ್ಟೆ ಗೂಡು ಕಟ್ಟಿಕೊಂಡಿರುತ್ತಿದ್ದೇವು, ಪಾನಗೋಷ್ಟಿಗಳು ನಾವೆಂದಿಗೂ ಮಾಡಲೇ ಇಲ್ಲ, ಎದುರಾಗಿ ಬರುವ ಬೆಟ್ಟದಂತಹ ಸಮಸ್ಯೆಗಳನ್ನು, ದಾಳಿಗಳನ್ನು ಎದುರಿಸುತ್ತಿದ್ದ ರೀತಿ, ನಾಟಕೀಯವಾದ ಪ್ರತ್ಯುತ್ತರಗಳಿಂದ ಅವುಗಳು ನೋಡ ನೋಡುತ್ತಿದ್ದಂತೆ ನುಚ್ಚು ನೂರಾಗುತ್ತಿದ್ದವು, ಈ ಫಲಿತಾಂಶ ಮಾತ್ರ ನಮ್ಮಿಬ್ಬರಲ್ಲಿಯೇ ಇರುತಿತ್ತು, ಈ ಗೆಲುವುಗಳ ಬಗ್ಗೆ ಮಾತಾಡಿಕೊಂಡು ಬಿದ್ದು, ಬಿದ್ದು ನಕ್ಕಿದ್ದು ಧೃತಿಗೆಡದೆ ಜಾಣ್ಮೆಯಿಂದ ಬಿತ್ತುತ್ತಿದ್ದ ಕೃಷಿಗೆ ದುರ್ಗಿಗುಡಿಯಲ್ಲಿರುವ ಶನಿಮಹಾತ್ಮ ದೇವಳದ ಹಿಂಬದಿ ಮಳಿಗೆ ಕಾಂಪ್ಲೆಕ್ಸ್‌ ಕಟ್ಟೆ ಸಾಕ್ಷ್ಯವಾಗಿದೆ
,
  ಒಂದಿಷ್ಟು ಘಟಾನುಘಟಿಗಳ ವಿರುದ್ದ, ಸಮಸ್ಯೆಗಳ ಸುರಿಸಿದವರ ವಿರುದ್ದ ಸೊಲ್ಲೆತ್ತದಂತೆ ಮಾಡಿರುವ ಘಟನೆಗಳನ್ನು ಇಲ್ಲಿ ವಿವರಿಸಲೊರಟರೆ ಸಾಲು ಸಗಟುಗಳಾಗುತ್ತದೆ, ಹೀಗಾಗಿ ಒಂದಿಷ್ಟು ಮೇಲ್ನೋಟಕ್ಕೆ ವಿವರಿಸಿದ್ದೇನಷ್ಟೆ.,
  
  ಹೀಗೆ ಸಾವಿರ ಸಮಸ್ಯೆಗಳಿದ್ದರೂ ಸರಿ ನಾವಿಬ್ಬರೆ ಬಗೆಹರಿಸುತ್ತಿದ್ದ ರೀತಿ, ನಡತೆಗಳನ್ನು ಇಂದು ಯೋಚಿಸಿದರೆ ಅಚ್ಚರಿ ತರಿಸುತ್ತದೆ, ಈ ನಡುವೆ  ಸಂಕಟಗಳು, ನೋವುಗಳನ್ನು ಪರಸ್ಪರ ತೋಡಿಕೊಂಡು ಕಂಬನಿಗಳ ತೊಟ್ಟಿಕ್ಕಿಸಿದ್ದು ಕೂಡ ನಮ್ಮಿಬ್ಬರಲ್ಲಿಯೇ ಮುಗಿದು ಹೋಗುತಿತ್ತು,

  ಕ್ಷಮಿಸಿ ಹೇಳುವ ಅವರಸರದಲ್ಲಿ ಸ್ನೇಹಿತನ ಪರಿಚಯ ಮಾಡಿಕೊಡುವುದನ್ನು ಮರೆತೆ, ಬಹುತೇಕರಿಗೆ ಗೊತ್ತಿದ್ದರು ಇಲ್ಲಿ ಮತ್ತೊಮ್ಮೆ ಲಗತ್ತಿಸುತ್ತೇನೆ. ಎಲ್ಲಾ ಸಂಕಟಗಳ ಕಾಲದಲ್ಲಿ ಧೃತಿಗೆಡೆದೆ, ಆತ್ಮಸ್ಥೆರ್ಯವನ್ನು ನನ್ನ ಎದೆಚರಿಗೆಗೆ ತುಂಬುತ್ತಿದ್ದ ಆಪ್ತಮಿತ್ರ ಸಹೋದರ ಮಲ್ಲಿಕಾರ್ಜುನ ಮರಡಿ, ಶಿವಮೊಗ್ಗದಲ್ಲಿ ಮಲೆನಾಡು ಕನ್ನಡ ಪಡೆ, ಕಟ್ಟಿದ ಸಂಸ್ಥಾಪಕರು ಕನ್ನಡದ ಕಟ್ಟಾಳುವಾಗಿ ಶ್ರಮಿಸುತ್ತಲಿ, ದಶಕಗಳ ಕಾಲ ಹೋರಾಟಗಳನ್ನು ರೂಪಿಸಿ ಈ ನೆಲಕ್ಕೆ ಎದೆಯೊಡ್ಡಿದ ಹೋರಾಟಗಾರ, ಇದೀಗ ಅವರು ಅರಣ್ಯ ಇಲಾಖೆಯ ನೌಕರಿಯಲ್ಲಿದ್ದಾರೆ, 

  ಇಂತಿವ ವಿಸ್ತೃತತೆಯನ್ನು ಇಲ್ಲಿ ಬರೆಯಬೇಕಾದ ಜರೂರತ್ತುಗಳನ್ನು ಈ ಲಗತ್ತಿಸಿರುವ ಪೋಟೋ ಪ್ರೇರೆಪಿಸಿತು ಎಂದರೆ ತಪ್ಪಾಗಲಾರದು ಅವರ ಫೇಸ್ಬುಕ್‌ ವಾಲ್ನಲ್ಲಿ ಇಂದು ಒಂದು  ಪೋಟೋ ನೋಡಿದೆ, ಈ ಪೋಟೋದ ಹಿಂದಿನ ಕಂಬನಿಗಳು ಹಾದು ಹೋಗುವುದು ಗೊತ್ತು ಮಾಡಿಕೊಂಡೇ, ಇಂತಹುದೇ ಸ್ಥಿತಿಯಲ್ಲಿ ಕಳೆದ 2014ರಲ್ಲಿ ನನ್ನದೊಂದು ಪೋಟೋ ಇತ್ತು ಇವರೆಡು ಪೋಟೋಗಳ ನಡುವಿನ ಸಾಮಿಪ್ಯ, ಸರಿದೂಗಿಸುವಿಕೆ ನೋಡಿ ಅಚ್ಚರಿ ಆಯಿತು, ಆಪ್ತಮಿತ್ರ ಸಹೋದರ ಮಲ್ಲಿಕಾರ್ಜುನ ಮರಡಿಯವರಿಗೂ ಗೊತ್ತಿಲ್ಲ, ಈ ಪೋಟೋ ಕುರಿತಾಗಿ, ಅನುಕರಣೆಯು ಮಾಡಿಲ್ಲ, ಅವರೊಳಗಿನ ಭಾವ ಈ ಪೋಟೋ ಕ್ಲಿಕ್‌ ಮಾಡಿಸಿದೆ, ಹಾಗೆಯೇ ನನ್ನ ಪೋಟೋ ಕೂಡ ಇದೆ, ಅದೇ ದುಃಖ ದುಮ್ಮಾನಗಳ ತುಂಬಿಕೊಂಡಿದೆ ಎನ್ನುವುದಕ್ಕೆ ಈ ಪೋಟೋಗಳೇ ಸಾಕ್ಷಿಯಾಗಿದೆ. ಈ ಮಾತ್ರದಿ ಇಲ್ಲಿ ಬರೆದುಕೊಂಡಿದ್ದೇನೆ.

 ಒಟ್ಟಿನಲ್ಲಿ ಸ್ನೇಹ ಎನ್ನುವುದು ಬಿಕರಿಯ ಭಾವವಲ್ಲ, ಯಾವುದೇ ಪ್ರತಿ ವ್ಯಾಮೋಹಗಳ ದಾಸ್ತಾನುವಲ್ಲ, ಅಥವಾ ನಿರೀಕ್ಷೆಗಳನ್ನು ಹೊತ್ತು ತಿರುಗುವ ಡ್ರಾಮಿಸ್ಟ್‌ ಮಾನಸೀಕತೆಯೂ ಅಲ್ಲ, ಇವೆಲ್ಲವುದರಿಂದ ದೂರವಿದ್ದು ಎಂದಿಗೂ ಸ್ನೇಹದ ನಿಷ್ಕಲ್ಮಶತೆಗೆ ಕುಂದುಗಳಿಲ್ಲದೆ 21 ವರುಷಗಳ ದಾಟಿಸಿರುವ ಸ್ನೇಹ ಇದಾಗಿದೆ ಎಂದಷ್ಟೆ ಇಲ್ಲಿ ಅಂಬೋಣಿಸುತ್ತಾ ಯಾರು ಮುರಿಯದ, ಬಿರುಕು ಮೂಡಿಸಲಾಗದ ಸ್ನೇಹ ನಮ್ಮಿಬ್ಬರದ್ದು ಎಂದೇ ಭಾವಿಸಿ ಈ ಸಾಲಿಗೆ ವಿರಮಿಸುತ್ತೇನೆ.
                                     -ಗಾರಾ.ಶ್ರೀನಿವಾಸ್

Comments