I ಬರೆಯುತ್ತಾರೆ ಗಾರಾ.ಶ್ರೀನಿವಾಸ್‌ I I ನಾಗಸಾಧು (ಅಘೋರಿ) ಮತ್ತು ಆ ಹೊತ್ತಿನ ಬೇಟಿ I

I ಬರೆಯುತ್ತಾರೆ ಗಾರಾ.ಶ್ರೀನಿವಾಸ್‌ I 
I ನಾಗಸಾಧು (ಅಘೋರಿ) ಮತ್ತು ಆ ಹೊತ್ತಿನ ಬೇಟಿ I 

ಹೌದು ನನ್ನ ಮತ್ತು ಸಾಧಿತ ಸಾಧುಗಳ ನಡುವಿನ ಸಾಂಗತ್ಯ ಹೀಗೆಯೇ ಸಾಗಿದೆ, ಒಮ್ಮೊಮ್ಮೆ ಆಕಸ್ಮಿಕ ಕೆಲವರ ಬೇಟಿ ಆಚ್ಚರಿ ಮೂಡಿಸುತ್ತದೆ, ಇದನ್ನು ಬಲವಾದ ಕಾರಣ ಏನೀರಬಹುದು ಅಸಲಿಗೆ ಗೊತ್ತಿಲ್ಲ, ಬಹುಷ್ಯಃ ಬಾಲ್ಯದಿಂದಲೇ ಅಮರಿಕೊಂಡ ಧ್ಯಾನದ ಬಹು ವಿಧಗಳು ಇಂದಿಗೂ ಎಡೆಬಿಡದೆ ಸಾಗಿದೆ, ಇಂತಹ ಅನೇಕ ಬೇಟಿ-ಘಟಿತ ಘಟನೆಗಳನ್ನು ಕೆಲವರೊಂದಿಗೆ ಹಂಚಿಕೊಂಡಿದ್ದೇನೆ. ಇಂದು ಕೂಡ ಅಂತಹದ್ದೆ ಸಾಕ್ಷೀಕರಿಸಿದ ಘಟನೆ ಜರುಗಿತು.

     ಇದ್ದಕ್ಕಿದ್ದಂತೆ ನಾಗಸಾಧು-ಅಘೋರಿಯರ್ವರು ಧಾವಿಸಿ ದರ್ಶಿಸಿದರು, ಅಚಾನಕ್‌ ಬಂದವರು ಆಧರಿಸಿ ಮಾತಾನಾಡಿಸಲು ಶುರು ಮಾಡಿದೆ, ಅವರು ಹೇಳಿದ ಸತ್ಯ, ತೋರಿಸಿದ ಪವಾಡ ಸದೃಶ್ಯಗಳು ನನ್ನನ್ನ ಮೂಕವಿಸ್ಮಿತನಾಗಿಸಿತು, ಆಧ್ಯಾತ್ಮದ ಒಳಹೂರಣಗಳ ಅನುಭವ ಅನುಭೂತಿಗಳು ಈಗಾಗಲೇ ಬಹಳಷ್ಟು ಕಟ್ಟಿಕೊಟ್ಟಿವೆ ಇದರಲ್ಲಿ ಈ ಬೇಟಿ ಮಹತ್ವಕರಿಸಿದೆ, ಆತ್ಮದ ಬೆಳಕಿಗೆ ಆವರಿಸಿಕೊಂಡ ಸೂತಕದ ಕತ್ತಲು ದೂಡಿ ಬೆಳಕನ್ನು ಹರಿಸುವಂತೆ ಮಾಡಿತು ಎಂದರೆ ತಪ್ಪಾಗಲಾರದು.

      ಆ ಸಾಧುಗಳು ಹೇಳಿದ್ದು ಬಹಳ ರಹಸ್ಯಮಯ, ಹಾಗೂ ಕುತೂಹಲಕ್ಕೀಡು ಮಾಡಿತು, ಅದರಲ್ಲಿ ಅವರು ಮಹಾಕಾಲನ ಆದೇಶದಂತೆ ಇಲ್ಲಿಗೆ ಬಂದಿದ್ದೇನೆ ಇದನ್ನು ನಂಬುತ್ತಿಯಾ..? ನೋಡಿಲ್ಲಿ ಎಂದು ಬರಿಗೈಯಲ್ಲಿ ತೋರಿಸಿದ ಪವಾಡಗಳು ನಾನು ಕಣ್ಣಾರೆ ಕಂಡು ಆಚ್ಚರಿಗೊಂಡೆ ಒಮ್ಮೆಲೆ ಭಯದಿ ನಿಂತುಬಿಟ್ಟೆ, ಆದರೆ ಸಾಧು ಮಾತ್ರ ತನ್ನ ಕಣ್ಣಾಲೆಗಳಿಂದ ನೇರವಾಗಿ ಏನು ಹರಿಸಿದಂತೆ ಭಾಸವಾಯಿತು, ಈ ನಂತರ ನಾನು ಪ್ರತಿ ಭಾರಿ ಧ್ಯಾನ ಮುಗಿದ ಮೇಲೆ ಅನುಭವಿಸುವ ನಿರುಮ್ಮಳತೆ ಇಲ್ಲಿ ಅನುಭೂತಿಯಾಗಿದ್ದು ವಿಶೇಷವಾಗಿತ್ತು. 

  ಒಟ್ಟಿನಲ್ಲಿ ಅವರು ಹೇಳಿದ ಸತ್ಯಗಳು ಇಲ್ಲಿ ತಿಳಿಸಿದರೆ ಉತ್ಪ್ರೇಕ್ಷೆಯಾಗುತ್ತದೆ ಹೀಗಾಗಿ ಅವರೊಂದಿಗಿನ ಬೇಟಿ-ಒಂದಿಷ್ಟು ಮಾತುಕತೆ ಕುರಿತಾಗಿ ವಿವರಿಸಿ ಮನಸು ಹಗುರವಾಗಿಸಿಕೊಳ್ಳುತ್ತಿದ್ದೇನೆ.

-ಜೈ ಮಹಾಕಾಲ್.‌       @ಗಾರಾ.ಶ್ರೀನಿವಾಸ್

Comments