ಬರೆಯುತ್ತಾರೆ ಗಾರಾ.ಶ್ರೀನಿವಾಸ್ I ವಿಚಾರಗಳು ಮತ್ತು ಆಚಾರಗಳು

ಬರೆಯುತ್ತಾರೆ ಗಾರಾ.ಶ್ರೀನಿವಾಸ್
I ವಿಚಾರಗಳು ಮತ್ತು ಆಚಾರಗಳು

ಚಿಂತನೆಗಳು ಚಿಂತನೆಗಳಷ್ಟೇ
ಮಂತ್ರ ಮಾಂಗಲ್ಯ ತಾತ್ವಿಕವಾಗಿ ಒಪ್ಪಬೇಕಷ್ಟೆ,
ಕಡು ಬಡವರು ಬೆಳಿಬೇಕಷ್ಟೆ..? 
ನಂತರದಿ ಬಡವರು ಬೇಡವಷ್ಟೆ..!

ಹಟ್ಟಿಯಲ್ಲಿರೋ ಮನಸುಗಳೇಕೆ..?!
ಆ ಜಗಲಿಗಳ ಕುರಿತು ಮಾತಾಡಬೇಕಷ್ಟೆ,
ಪ್ರಗತಿಪರತೆಯ ಹಾದಿಯಲ್ಲಿರಬೇಕಷ್ಟೆ,
ಉನ್ನತದೊಂದಿಗೆ ಸಾಂಗತ್ಯ ಬಯಸಬೇಕಷ್ಟೆ,

ಇದೇನು ಮದುವೆಯ ಕರೆಯೋಲೆ,
ಮಂತ್ರಿಗಳು, ಆಡಳಿತ ಷಾಹಿಗಳು, ಸಿರಿವಂತರು, 
ಸೆಲೆಬ್ರಿಟಿಗಳು, ಹೈ ಪ್ರೋಫೈಲ್ ನೆರಳುಗಳು, ಕ್ರಿಮಿನಲ್ಗಳು, ದುಷ್ಟರು ದುಮ್ಮಾನರು,
ಈ ನಡುವೆ ಸಾಮಾನ್ಯರು ಕಾಣಲಿಲ್ಲವಷ್ಟೆ,

ವಿಚಾರಗಳು ಆಚಾರದಲ್ಲಿರಬೇಕೇ..?!
ಖಾಲಿ ಮೈಕುಗಳಲಿ ಪ್ರತಿಧ್ವನಿಸಬೇಕಷ್ಟೆ,
ವೀಡಿಯೋ ರೀಲ್ಸ್ ಗಳಲಿ ದರ್ಶಿಸಬೇಕಷ್ಡೆ,
ಅಂದಿನ ಅಲ್ಲಮ, ಇಂದಿನ ಡಾಲಿ,

ಪ್ರಗತಿಪರರ ಜಗಲಿಗಳಲಿ ಅವನದೇ ಲಾಲಿ,
ಬೆಳೆದಿದ್ದಾಗಿದೆ, ಮತ್ತದೇ ಸಿರಿ ಮುಳ್ಳುಗಳ ಜಾಲಿ,
ಊರ ಬಾಗಿಲಿಗೆ ತೋರಣ, ಬಡತನವಿಲ್ಲದ ಕಾರಣ,
ವೈಚಾರಿಕತೆ ಎನ್ನುವ ಕ್ಲಿಷ್ಟಕರತೆಗಳಿಲ್ಲ,
ಮಾದರಿಯಾಗದ ಸಂಭ್ರಮಗಳು ಇವೆಲ್ಲಾ,

ಶುಭವಾಗಲಿ ಧ್ವಿಮುಖ, ಪಾತ್ರಧಾರಿ ನೀತಿಗೆ..
ಒಳಿತಾಗಲಿ ನವ ದಾಂಪತ್ಯದ ದಿನಮಾನಕೆ,

ಸೈಲೆಂಟ್ ಸುನೀಲ ಬಂದು ಹಾರೈಸಿದ ಎನ್ನುವ ಕಾರಣವಲ್ಲ, ಈ ಹೊತ್ತಿನ ಮಾಧ್ಯಮಿ ಮನಸುಗಳಿಗೆ, ಇದೇ ಡಾಲಿ ಧನಂಜಯನಿಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿರುವ ಜರೂರತ್ತಿದೆ.. ಇವರಾದ್ದಾದರೆ ಅದು ಸರಿ, ಅವರದ್ದಾದರೆ ಅದು ಅಕ್ಷರಶಃ ತಪ್ಪು ಎನ್ನುವ ಮಾನಸೀಕ ಹುಂಬರ ನಡುವೆ ಅವರೇ ಕಟ್ಟಿಕೊಂಡ ವಿಚಾರಧಾರೆಗಳು ನರಳುತ್ತಿದೆ ಎನ್ನುವುದನ್ನು ಇಲ್ಲಿ ದರ್ಶಿಸಿಕೊಳ್ಳಬಹುದು,

Comments