ಬರೆಯುತ್ತಾರೆ ಗಾರಾ.ಶ್ರೀನಿವಾಸ್
ಅಘೋರಿಗಳ ಹೆಜ್ಜೆಗಳು
ಹೌದು ಅಘೋರಿಗಳ ಕುರಿತಾಗಿ ವಿಸ್ತೃತಗೊಳಿಸುವಷ್ಟು ನಾವಿನ್ನೂ ಓದಿಲ್ಲ, ಆ ಜೀವನದ ಶೈಲಿ, ಅಘೋರ ಅನುಷ್ಠಾನಗಳು ಅಷ್ಟಾಗಿ ತಿಳಿದಿಲ್ಲ ಎನ್ನುವುದು ಅಕ್ಷರಶಃ ವಾಸ್ತವ, ಏಕೆಂದರೆ ಅದೊಂದು ಅಲೌಕಿಕ ಮಾರ್ಗದ ಸಾಧಿತರ ಜೀವನವಲ್ಲವೇ.. ಯಾರು ಈ ಬಗೆಗಳ ಅನುಭವ ಅನುಭೂತಿಗಳಾಗಿ ಅವರೊಂದಿಗಿನ ಅನುಷ್ಠಾನಗಳ ಅನುಭವ ಹೊಂದಿದ್ದರೆ ಮಾತ್ರ, ಈ ಅಘೋರ ನಿಗೂಢತೆ ಸ್ವಲ್ಪಮಟ್ಟಿಗೆ ತಿಳಿಯಬಹುದು,.
ಬಾಹ್ಯಮುಖಿ ಆಸೆ, ಅಕಾಂಕ್ಷೆಗಳು, ವ್ಯಾಮೋಹಗಳ ಹಪಾಹಪಿಯಲ್ಲಿ, ಬಹುಮುಖ್ಯವಾಗಿ ಭಯಬೀತವನ್ನು ಆಹ್ವಾನೆ ಮಾಡಿಕೊಂಡು ಪರಿತಪಿಸುವವರೆಂದಿಗೂ ಅಘೋರ ತತ್ವಗಳ ಬಳಿ ಕೂಡ ಸುಳಿದಾಡಲು ಸಾಧ್ಯವಿಲ್ಲ, ಧ್ಯಾನಮಾರ್ಗದಿ ಅಭ್ಯಾಸಿಯಾಗಿ, ವರುಷಗಳ ಕಾಲಮಾನದಿ ಅಗೋಚರಗಳಿಗೆ ಹತ್ತಿರವಾದವರು ಮಾತ್ರವೇ ಅಘೋರಿಗಳ ಸಾಂಗತ್ಯ ಉಂಟು ಮಾಡಬಲ್ಲದಾಗಿದೆ,
ಓರ್ವ ಅಘೋರಿಯಾಗಬೇಕೆಂದರೆ ಬಹಳಷ್ಟು ಕ್ಲಿಷ್ಟಕರ ಹಾದಿಗಳನ್ನು ಸವೆಸಬೇಕು, ಅತಿ-ಇತಿಗಳಿಂದ ವಿಮುಕ್ತನಾಗಬೇಕು, ಋತುಮಾನಗಳೇ ಏಕ ಸಾಧನೆಗೆ ಸಾಕ್ಷೀಯಾಗಬೇಕು, ಪಂಚಭೂತಗಳಲ್ಲಿ ಮನಸನ್ನು ಲೀನಗೊಳಿಸಬೇಕು, ಅವುಗಳೊಂದಿಗೆ ನಿತ್ಯ ಒಡನಾಟ, ಬೆಸುಗೆಗಳ ಹೊಸೆದುಕೊಳ್ಳಬೇಕು, ಆಗ ಮಾತ್ರವೇ ಅಘೋರಿಯಾಗಲು ಸಾದ್ಯವೆನ್ನುತ್ತದೆ,
ಇಂತಹ ಸಾಧಿತರು ನಾಗಸಾಧುಗಳು (ಅಘೋರಿಗಳು) ಬಾಹ್ಯಮುಖಿ ಹಪಾಹಪಿಗಳಿಗೆ ಹೇಗೆ ನೇರ ಸಂಪರ್ಕಕ್ಕೆ ಬಂದು ಬಿಡುತ್ತಾರೆ..? ಸಾಧ್ಯವೇ ಇಲ್ಲವಾಗಿದೆ, ಒಂದು ಪೂರ್ವಾಶ್ರಮದ ಸಂಪರ್ಕ, ಅಥವಾ ಧ್ಯಾನಮುಖಿಯಾಗಿ ಅಭ್ಯಾಸಿಯಾಗಿದ್ದರೆ ಮಾತ್ರ ನಾಗಸಾಧುಗಳು ಎದುರಾಗಿಯೇ ಬಿಡುತ್ತಾರೆ, ಹೀಗೆ ಮನುಷ್ಯ ಜೀವನಕ್ಕೆ ಅವರೊಬ್ಬರ ಸಾಂಗತ್ಯ ಬೆಸೆದು ಕೊಂಡಿದ್ದರೆ ಯಾರು ಏನು ಮಾಡಲಾಗದು, ಅಂತಹದೊಂದು ಸರ್ಪಗಾವಲಿನ ಆಶೀರ್ವಾದ ಪಹರೆ ಸುದರ್ಶನ ಚಕ್ರದಂತೆ ಶಾಶ್ವತವಾಗಿರುತ್ತದೆ.
ಅಘೋರಿಗಳಿಗೆ ಶಿವ ಮಾತ್ರವೇ ಅಂತಿಮ, ಉಳಿದಿದ್ದೆಲ್ಲವೂ ಅಮುಖ್ಯವಾಗಿರುತ್ತದೆ. ಹೀಗಿದ್ದಾಗ ಅಘೋರಿಗಳ ಸಂಪರ್ಕ ಸಾಧಿತನಾಗಿ ಶಿವನಿಗೆ ಶರಣಾಗಿರಲೇಬೇಕು ಎನ್ನುವುದು ಎಷ್ಟು ಸತ್ಯವೋ, ಅಲೌಕಿಕ ಧ್ಯಾನದ ಅಭ್ಯಾಸಿಯಾಗಿರಬೇಕು ಎನ್ನುವುದು ಅದಷ್ಟೆ ದಿಟವಾಗಿದೆ.
-ಗಾರಾ.ಶ್ರೀನಿವಾಸ್
Comments
Post a Comment