ಬರೆಯುತ್ತಾರೆ ಗಾರಾ.ಶ್ರೀನಿವಾಸ್‌ I ಸಿಎಂ. ಸಿದ್ದರಾಮಯ್ಯನವರಿಗೊಂದು I ಬಹಿರಂಗ ಪತ್ರ..

ಬರೆಯುತ್ತಾರೆ ಗಾರಾ.ಶ್ರೀನಿವಾಸ್‌ I
ಸಿಎಂ. ಸಿದ್ದರಾಮಯ್ಯನವರಿಗೊಂದು I ಬಹಿರಂಗ ಪತ್ರ
..

ಇಲಾಖಾಧಿಕಾರಿಗಳು ನೀಡುವ ಕಾನೂನು ವಿರೋಧಿ "ಹಿಂಬರಹ" ರದ್ದತಿಗೆ ಆಗ್ರಹ

#ರಾಜ್ಯದಲ್ಲಿ ವಿವಿಧ ಸಾರ್ವಜನಿಕ ಕೆಲಸಗಳಿಗಾಗಿ ಸಲ್ಲಿಸಲಾಗುವ ದೂರು ಅರ್ಜಿಗಳ ಮಾರ್ಗಸೂಚಿಗಳನ್ನು ರೆವಿನ್ಯೂ, ಪೊಲೀಸ್‌, ಕಂದಾಯ, ನಗರಸಭೆ/ಪುರಸಭೆ/ಮಹಾನಗರ ಪಾಲಿಕೆ ಇನ್ನೀತರ ವಿವಿಧ  ಸಾರ್ವಜನಿಕ ಸರಕಾರಿ ಇಲಾಖೆಗಳು ಅನುಸರಿಸುತ್ತಿದಿಯಾ..? ಎನ್ನುವ ತನಿಖೆಗೆ ಪ್ರಸ್ತುತ ರಾಜ್ಯ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮುಂದಡಿಯಾಗುವ ಜರೂರತ್ತಿದೆ,

    ಏಕೆಂದರೆ ಬಹುತೇಕ ನಾಗರೀಕ ಅರ್ಜಿಗಳನ್ನು ವಿಲೆ ಇಡುವುದು, ಅಥವಾ ಅನ್ಯ ಕಾರಣಗಳು ಲಗತ್ತಿಸಿ "ಹಿಂಬರಹ" ನೀಡಿ ಸಲ್ಲಿಸಲಾಗಿರುವ ಅರ್ಜಿಯನ್ನು ಮುಕ್ತಾಯಗೊಳಿಸುತ್ತಿರುವುದರಿಂದ ಸಾರ್ವಜನಿಕವಾಗಿ ಸಾಮಾಜಿಕ ನ್ಯಾಯ ಸಿಗುತ್ತಿಲ್ಲ ಬದಲಿಗೆ "ಹಿಂಬರಹದ" ಭೂತದಿಂದ ಮತ್ತಷ್ಟು ನೋವು-ಸಂಕಟಗಳಿಗೆ ಅಲೆದಾಡಿಸುವ ಜೀತ ಪದ್ದತಿಗೆ ದುರ್ಬಲ, ಅಸಾಹಾಯಕರ ಅರ್ಜಿಗಳು ಸಿಲುಕುತ್ತಿರುವುದು ಸಾಮಾನ್ಯವಾಗಿ ಹೋಗಿದೆ.

ಉಳ್ಳವರಿಗೆ ಹಾಗೂ ಮಾಫಿಯಾಗಳಿಗೆ, ಅಧಿಕಾರದ ದನಧಾಹಿಗಳಿಗೆ ಈ "ಹಿಂಬರಹ" ಎನ್ನುವ ಅಧಿಕಾರ ದುರುಪಯೋಗದ ಪ್ರತಿಗಳು ರಸದೂಟವಾಗಿದೆ ಅಲ್ಲದೆ ಮಹಾ ಭ್ರಷ್ಠಾಚಾರಕ್ಕೂ ಕಾರಣವಾಗುತ್ತಿದೆ, ಬೇಡಿಕೆಗಳು ಈಡೇರಿಸುವುದಕ್ಕೆ, ಅಥವಾ ಸೂಕ್ತ ದಾಖಲೆಗಳು ನ್ಯಾಯ ಒದಗಿಸುವುದಕ್ಕೆ ರಹದಾರಿಗಳಿದ್ದರು ಸಹ ಪೂರಕವಾಗಿ ಅಧಿಕಾರ ನಿರ್ವಹಿಸದೆ ಇರುವುದು ಸಾಂವಿಧಾನಿಕ ವಿರೋಧವು ಆಗಿದೆ ಹಾಗೂ ಸಾರ್ವಜನಿಕ ಅರ್ಜಿ ಕಾಯ್ದೆ ಉಲ್ಲಂಘನೆಗೊಂದು ಈ ಮೂಲಕ ಸಾಕ್ಷ್ಯವನ್ನು ಬಹಿರಂಗವಾಗಿಯೇ ಇದೆ ಎನ್ನುವುದು ತಮ್ಮ ಆವಗಾಹನೆಗೆ ತರಬಯಸುವೆ.


   ಹೌದು ವಿವಿಧ ಕಾರಣಗಳಿಗಾಗಿ ಸಲ್ಲಿಸಲಾಗುವ ಅರ್ಜಿಗಳಿಗೆ ಆಯಾ ಆಧಿಕಾರಿಗಳು ಅರ್ಜಿಗೆ ಲಗತ್ತಾಗಿರುವಂತೆ ಪರಿಶೀಲನೆ ನಡೆಸುವುದು, ತನಿಖಿಸುವುದು, ದಾಖಲೆಗಳನ್ನು ಒದಗಿಸುವುದು, ಅಧಿಕಾರ ದುರುಪಯೋಗವಾಗಿದ್ದರೆ ಸರಿಪಡಿಸಿಕೊಳ್ಳುವುದು, ಆ ಅರ್ಜಿಗೆ ನ್ಯಾಯವನ್ನು ಒದಗಿಸಲು ಮುಂದಾಗದೇ ಪೂರ್ವಗ್ರಹ ಪೀಡಿತರಂತೆ ವರ್ತಿಸಿ ಅಡ್ಡಗೋಡೆಯ ಮ್ಯಾಲೆ ದೀಪವಿಟ್ಟಂತೆ ಏಕಪಕ್ಷೀಯವಾಗಿ ಹಿಂಬರಹ ನೀಡಿ ಅರ್ಜಿಯನ್ನು ವಿಲೆ ಅಥವಾ ಮುಕ್ತಾಯಗೊಳಿಸುವುದು ಅಂತಹ ಅಧಿಕಾರಿಗಳ/ಇಲಾಖೆಗಳ ಸಂಪೂರ್ಣ ಅಧಿಕಾರ ದುರುಪಯೋಗವನ್ನು ಮೊದಲ ಹಂತದಲ್ಲಿಯೇ ಗೊತ್ತು ಮಾಡಿಕೊಳ್ಳಬಹುದಾಗಿದೆ ಎಂದು ತಮಗೆ ತಿಳಿಸಲಿಚ್ಚಿಸುವೆ,

   ಅರ್ಜಿ ನೀಡುವುದು ಅರ್ಜಿಯಲ್ಲಿ ತೋಡಿಕೊಂಡಿರುವ ಸಮಸ್ಯೆಗಳ ಬಗೆಹರಿಸುವಂತೆ, ನ್ಯಾಯಯುತವಾಗಿ, ಸಾಂವಿಧಾನಿಕವಾಗಿ ನಡೆದುಕೊಂಡು ಪರೀಶೀಲಿಸಲು, ಆದರೆ ಇಲ್ಲಿ ಬಹುತೇಕ ಪ್ರಕರಣಗಳಲ್ಲಿ ಶೇಕಡ 90% ರಷ್ಟು ಸಾರ್ವಜನಿಕ ಅರ್ಜಿಗಳನ್ನು ವಿಲೆ ಇಡುವುದು ಯಾವ ಕಾನೂನು..? ಅಲ್ಲದೆ ಈ ರೀತಿಯ ಹಿಂಬರಹ ನೀಡುವುದಕ್ಕೆ ಅಧಿಕಾರಿಗಳ ನೇಮಕಾತಿ ಆಗಿದಿಯಾ..? ಎನ್ನುವುದೇ ಸಾರ್ವಜನಿಕವಾದ ಪ್ರಶ್ನೆಯಾಗಿದೆ.
  ಸುಳ್ಳು ಅರ್ಜಿಗಳು, ಬಂದರೆ ಅದಕ್ಕೂ ಸರಕಾರಿ ಇಲಾಖೆಯ ಸಮಯವನ್ನು ಹಾಳು ಮಾಡಿರುವುದಕ್ಕೆ ಕ್ರಮ ಜರುಗಿಸಬಹುದಾಗಿದೆ, ಆದರೆ ನಾಗರೀಕ ಅರ್ಜಿಗಳು ತಮ್ಮ ಮೇಲಿನ ನೋವುಗಳಿಗೆ, ಆಗಬೇಕಾದ ಬೇಡಿಕೆಗಳಿಗೆ ಬಂದರೆ ಅದಕ್ಕೆ ಸಾಂವಿಧಾನಿಕವಾದ ಸರಕಾರಿ ಕರ್ತವ್ಯದಡಿ ಅವರಿಗೆ ನ್ಯಾಯ ಒದಗಿಸಲಾಗದೆ ಏಕಾಎಕಿ "ಹಿಂಬರಹ" ನೀಡುವುದು ಕೂಡ ಅಕ್ಷಮ್ಯ ಅಧಿಕಾರ ದುರುಪಯೋಗವಾಗಿದೆ ಎನ್ನುವುದು ತಮ್ಮ ಗಮನಕ್ಕೆ ತರಬಯಸುವೆ.

   ಇದು ರಾಜ್ಯದಲ್ಲಿ ದಿನವಹಿ ಸರಾಸರಿ ಮೂಲದ ಪ್ರಕಾರ ವಿವಿಧ ಇಲಾಖೆಗಳು ನೀಡುವ "ಹಿಂಬರಹ" ಪ್ರತಿಗಳು ಹತ್ತು ಸಾವಿರಕ್ಕೂ ಹೆಚ್ಚು ಎನ್ನುವುದು ಸಾಮಾಜಿಕ ಹೋರಾಟಗಾರರ ಶೇಕಡವಾರು ಲೆಕ್ಕವಾಗಿದೆ, ಇದರಲ್ಲಿ ಕಂದಾಯ ಇಲಾಖೆಗಳು ಹಾಗೂ ಪೊಲೀಸ್‌ ಇಲಾಖೆಗಳು "ಹಿಂಬರಹ" ನೀಡುವಲ್ಲಿ ಅಗ್ರಮುಖಿಯಾಗಿದೆ ಎನ್ನುವುದು ತಾವು ಕೂಡ ಪರೀಶಿಲಿಸಬಹುದಾಗಿದೆ.

ಶಿವಮೊಗ್ಗದಲ್ಲಿ ಒಂದಿಷ್ಟು ನಿಖರವಾಗಿ ಗಮನಕ್ಕೆ ಬಂದಂತೆ ಪೊಲೀಸ್‌ ಠಾಣೆಗಳು ಹಾಗೂ ತಾಲ್ಲೂಕು ಕಛೇರಿ, ಡಿಡಿಎಲ್‌ ಆರ್‌ ಕಛೇರಿ ಸ್ಥಳೀಯ ಸಂಸ್ಥೆಗಳು ಹಾಗೂ ಅಚ್ಚರಿ ಎನ್ನುವಂತೆ ಜಿಲ್ಲಾಧಿಕಾರಿಗಳ ಕಛೇರಿಯು ಕೂಡ ಇಂತಹ ಹಿಂಬರಹ ನೀಡುವಲ್ಲಿ ಹಿಂದೆ ಇಲ್ಲ ಎನ್ನುವುದಕ್ಕೆ ಪ್ರತಿ ದಿನವಹಿ ಸಾರ್ವಜನಿಕ ಅರ್ಜಿಗಳಿಗೆ ನೀಡುವ "ಹಿಂಬರಹ" ಎನ್ನುವ ಕಾನೂನು ಉಲ್ಲಂಘನೆಯ ಪ್ರತಿಗಳು ನೂರಕ್ಕೂ ಹೆಚ್ಚು ಎನ್ನುವ ಅಂಕಿ-ಅಂಶಗಳನ್ನು ತಾವು ಪರಿಶೀಲಿಸಿ "ಹಿಂಬರಹ" ಎನ್ನುವ ಕಾನೂನು ಉಲ್ಲಂಘನೆಯ ಪ್ರತಿಗಳು ನೀಡಿ ಅರ್ಜಿ ವಿಚಾರಣೆಯನ್ನು ಮುಕ್ತಾಯಗೊಳಿಸದೇ ಸಾರ್ವಜನಿಕವಾಗಿ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡುವಂತಾಗಲಿ, ವಿನಾಃ ಕಾರಣ ಅರ್ಜಿಗಳಿಗೆ ಹಿಂಬರಹ ನೀಡುವ ಪದ್ದತಿಯನ್ನು ರದ್ದಿನಲ್ಲಿಟ್ಟು ಇಲಾಖಾಧಿಕಾರಿಗಳನ್ನು ಅಮಾನತ್ತಿಗೆಗೊಳಪಡಿಸಿ ತನಿಖಿಸಲು ಆದೇಶಿಸಬೇಕೆಂದು ಈ ಬಹಿರಂಗ ಪತ್ರವನ್ನು ತಮ್ಮ ಮುಂದಡಿ ಸಾರ್ವಜನಿಕವಾಗಿ ಕಳುಹಿಸುತ್ತಿದ್ದೇನೆ.

   ಮೇಲಾಗಿ " ಹಿಂಬರಹ" ಎನ್ನುವುದು ಸಾಮಾಜಿಕ ಪಿಡುಗು ಎನ್ನುವುದು ಈಗಾಗಲೇ ಸಾಕಷ್ಟು ಪ್ರಕರಣಗಳಿಂದ ದೃಡಪಡುತ್ತಿದೆ, ಓರ್ವ ಸಾಮಾನ್ಯ ನಾಗರೀಕ ತನಗೆ ಈ ಅರ್ಜಿಯಿಂದ ನ್ಯಾಯ ಸಿಗುತ್ತದೆ ಎಂದು ಭಾವಿಸಿ ದೂರು, ಮನವಿ ಅರ್ಜಿಗಳನ್ನು ನೀಡುತ್ತಾನೆ ಇಲ್ಲಿ ನ್ಯಾಯ ಎನ್ನುವುದು ಮರೀಚಿಕೆಯಾದರೆ ಅಂತಹ ನಾಗರೀಕ ಮತ್ತೇಲ್ಲಿ ನ್ಯಾಯಕ್ಕಾಗಿ ಜೀತ ಮನಸಿನಿಂದ ಯಾರ ಕಾಲಿಗೆ ಬೀಳಬೇಕು ಎನ್ನುವುದು ತಾವೇ ಮನಗಂಡು ಈ ಅನಿಷ್ಟ ಪದ್ದತಿಯನ್ನು ಅತ್ಯಂತ ಗಂಭೀರತೆಯಲ್ಲಿ ಪರಿಗಣಿಸಿ ರದ್ದುಪಡಿಸಬೇಕು, ಹಿಂಬರಹ ನೀಡಿ ಅರ್ಜಿ ವಿಲೆ ಮಾಡುವ ಅಧಿಕಾರಿಗೆ ಕೂಡಲೇ ಕಡ್ಡಾಯ ರಜೆ ನೀಡಿ ಮನೆಗೆ ಕಳುಹಿಸುವ ಎಲ್ಲಾ ಕೈಂಕರ್ಯಗಳನ್ನು ಕೈಗೊಳ್ಳುವ ಜರೂರತ್ತಿದೆ ಎಂದು ಸಾಮಾಜಿಕವಾಗಿ ಭಾವಿಸಿ ಈ ಪತ್ರದ ಸಂಗತಿಯನ್ನು ತಮ್ಮ ಆವಗಾಹನೆಗೆ ತರಬಯಸುವೆ.
               Editor and writer @Gara Srinivas



Comments