ನಗರದ ಹೊರವಲಯದ ಹಾಳೂರ್ ಅನುಪಿನಕಟ್ಟೆಯ ಗ್ರಾಮಠಾಣಾ ಜಮೀನಿನಲ್ಲಿ ಅಕ್ರಮ ಶೆಡ್ ಗಳ ನಿರ್ಮಾಣ
ಶಿವಮೊಗ್ಗ : ಲ್ಯಾಂಡ್ ಲಿಟಿಗೇಶನ್ ಎನ್ನುವ ರಕ್ಕಸರೂಪಿ ಕಬ್ಜಾಗಳು ದಿನದಿಂದ ದಿನಕೆ ಸಾಮಾನ್ಯವಾಗಿ ಹೋಗಿದೆ, ಇದೀಗ ಇಂದು ಮಹಾಶಿವರಾತ್ರಿಯ ಹಬ್ಬದ ಸಡಗರದಲ್ಲಿದ್ದಾಗಲೇ ಏಕಾಎಕಿ ಹದಿನೈದಕ್ಕೂ ಹೆಚ್ಚು ಅಕ್ರಮ ಶಡ್ ಗಳು ನಗರದ ಹೊರ ವಲಯದ ಹಾಳೂರ್ ಅನುಪಿನಕಟ್ಟೆಯಲ್ಲಿ ನಿರ್ಮಾಣವಾಗಿದೆ,
ಈ ಸುದ್ದಿ ತಲುಪುವ ಈ ಹಂತದಲ್ಲಿಯೇ ಹದಿನೈದು ಸಂಖ್ಯೆಗೆ ಅಕ್ರಮ ಶೆಡ್ ಗಳು ಏರಿದ್ದು ಶಿವರಾತ್ರಿಯೊಳಗೆ ಐವತ್ತಕ್ಕೆ ಏರಲಿದೆ ಎನ್ನುವ ಮೂಲಗಳ ಪ್ರಕಾರ ನಟೋರಿಯಸ್ ಲ್ಯಾಂಡ್ ಲಿಟಿಗೇಶನ್ ಗ್ಯಾಂಗ್ ಕೂಡ ಕಬ್ಜಾ ಮಾಡಲು ಶೆಡ್ ಮೆಟೀರಿಯಲ್ ಗಳು ಜೋಡಿಸಿಕೊಂಡಿದ್ದಾರೆ ಎನ್ನಲಾಗಿದೆ,
ಇಂತಹದೊಂದು ಅನಾಹುತಗಳ ಕುರಿತಾಗಿ "ಇತ್ಯಾದಿ" ಪಾಕ್ಷಿಕ ಪತ್ರಿಕೆ ಇಲಾಖೆಗಳ ಗಮನಕ್ಕೆ ತಂದಿತ್ತಾದರೂ ಇಲಾಖಾಧಿಕಾರಿಗಳು ಯಾವುದೇ ಕ್ರಮ ಜರುಗಿಸದೇ ಮೌನವಹಿಸಿರುವುದಕ್ಕೆ ಮತ್ತೊಂದು ಪ್ರಕರಣ ಲೇಪಿಸಿಕೊಂಡಿದೆ,
ಮೇಲಾಗಿ ಗ್ರಾಮಠಾಣಾ ಭೂ ಕಾಯ್ದೆಯನ್ವಯ ಯಾವುದೇ ಖಾಸಗಿ ವ್ಯಕ್ತಿಗಳಿಗೆ ಮಂಜೂರಾತಿ ಮಾಡುವ ಹಕ್ಕಿಲ್ಲ, ಬದಲಿಗೆ ಈ ಭೂ ಪ್ರದೇಶವನ್ನು ರೆವಿನ್ಯೂ ಕಾಯ್ದೆಯಂತೆ ಸಾರ್ವಜನಿಕ ಬಹು ಉಪಯೋಗಕ್ಕೆ ಬಳಸಿಕೊಳ್ಳಬಹುದಾಗಿದೆ ಹೀಗಿದ್ದರೂ ತಾಲ್ಲೂಕ್ ಕಛೇರಿಯ ಅಧಿಕಾರಿಗಳು, ತಹಶಿಲ್ದಾರ್ ಇತ್ತಕಡೆ ಚಿತ್ತವರಿಸದೇ ಇರುವುದು ಪ್ರಶ್ನಾರ್ಥಕವಾಗಿದೆ,
Comments
Post a Comment