ಶಿವಮೊಗ್ಗ ನಗರದಲ್ಲಿ ಸರ್ಕಾರಿ ಸಾಮ್ಯದ ಕಟ್ಟಡಗಳಿಗೆ ಕಾನೂನಿನ ಅರಿವೇ ಇಲ್ಲದಂತಾಗಿದೆ : ಪಾಲಿಕೆಯ ಮಾಜಿ ಸದಸ್ಯ ಐಡಿಯಲ್ ಗೋಪಿ

ಶಿವಮೊಗ್ಗ ನಗರದಲ್ಲಿ ಸರ್ಕಾರಿ ಸಾಮ್ಯದ ಕಟ್ಟಡಗಳಿಗೆ ಕಾನೂನಿನ ಅರಿವೇ ಇಲ್ಲದಂತಾಗಿದೆ : ಪಾಲಿಕೆಯ ಮಾಜಿ ಸದಸ್ಯ ಐಡಿಯಲ್ ಗೋಪಿ

ಶಿವಮೊಗ್ಗ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಮಿಸುವ ಕಟ್ಟಡಗಳಿಗೆ 2011ರ ನಂತರ ನಗರ ಯೋಜನೆ ಅನುಷ್ಠಾನ ಗೊಂಡಿದ್ದು (CDP) ನಗರದ ರಸ್ತೆ ಗಳಿಗೆ CDP ಪ್ಲಾನ್ ಪ್ರಕಾರ ರಸ್ತೆಯ ಇಕ್ಕೆಲ ಗಳಲ್ಲಿ ಪ್ರಪೋಸ್ಡ್ ಪ್ಲಾನ್ ಪ್ರಕಾರ ರಸ್ತೆ ಯ ಜಾಗವನ್ನು ದಾನ ಪತ್ರ ನೀಡಿ ಉಳಿದ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಬೇಕು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಕಾನೂನನ್ನ ಜಾರಿ ಮಾಡುವ ಪಾಲಿಕೆ ಅಧಿಕಾರಿಗಳು ಸರ್ಕಾರಿ ಸಾಮ್ಯದ ಕಟ್ಟಡ ನಿರ್ಮಾಣ ಮಾಡುವ ಸಂಧರ್ಭದಲ್ಲಿ ಕಾನೂನು ಉಲ್ಲಂಘನೇ ಆದರೂ ಕೂಡ ಅತ್ತ ಕಡೆಗೆ ಸುಳಿಯುವುದು ಇಲ್ಲವೆಂದು ಪಾಲಿಕೆಯ ಮಾಜಿ ಸದಸ್ಯರಾದ ಐಡಿಯಲ್ ಗೋಪಿಯವರು ವಿವರಿಸಿದ್ದಾರೆ,

ಇತ್ತೀಚಿಗೆ ಪಾಲಿಕೆ ಯಿಂದ ಕಟ್ಟಿದ ಗೌರವ ಲಾಡ್ಜ್ ಎದುರಿನ ಹೂವು ಹಣ್ಣು ಮಾರ್ಕೆಟ್ ಕಟ್ಟಡ ಶಿವಪ್ಪನಾಯಕ ಪ್ರತಿಮೆ ಎದುರಿನ ಪಾಲಿಕೆ ಕಟ್ಟಡ ಜೋಯಲುಕಾಸ್ ಎದುರಿನ ಹಾಪ್ ಕಾಮ್ಸ್ ವಾಣಿಜ್ಯ ಮಳಿಗೆ ಗಳು ಅದೇ ರೀತಿ ಈಗ *ಜಿಲ್ಲಾ ಪಂಚಾಯತ್* ನ ಮುಖ್ಯ ದ್ವಾರ ನಿರ್ಮಾಣ ಮಾಡುತ್ತಿದ್ದು ಸದರಿ ಮುಖ್ಯ ದ್ವಾರ ಕುವೆಂಪು ರಸ್ತೆ ಗೆ ನಿರ್ಮಾಣ ಮಾಡಲಾಗುತ್ತಿದ್ದೂ ಕುವೆಂಪು ರಸ್ತೆ CDP ಪ್ಲಾನ್ ಪ್ರಕಾರ 80 ಅಡಿ ರಸ್ತೆಯಾಗಿದ್ದು ರೋಡ್ ಸೆಂಟರ್ ನಿಂದ 40 ಅಡಿ ಬಿಟ್ಟು ಕಟ್ಟಡ (ಕಂಪೌಂಡ್ ) ನಿರ್ಮಾಣ ಮಾಡಬೇಕು 

 *ಕುವೆಂಪು* ರಸ್ತೆಯಲ್ಲಿ *ಪಾದಚಾರಿ* ಗಳು ಪ್ರಾಣವನ್ನು ಕೈಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಇದ್ದು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಕಾನೂಹರಿಸಬೇಕಿಇವಿಲ್ಲದೆ ಈ ಹಿಂದೆ ರಸ್ತೆಯ ಇಕ್ಕೆಲ ಗಳಲ್ಲಿ ಒಂದು ಅಡಿ ಜಾಗ ಬಿಡದೆ ಕಟ್ಟಡ ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಪಾಲಿಕೆಯ ಮಾಜಿ ಸದಸ್ಯರಾದ ಐಡಿಯಲ್ ಗೋಪಿಯವರು ಹೇಳಿದ್ದಾರೆ

ಎದುರಿಗೆ ನೂತನವಾಗಿ ಕಟ್ಟಿರುವ ಖಾಸಗಿ ಬಿಲ್ಡಿಂಗ್ ಮಾಲೀಕರು 10 ಅಡಿ ಜಾಗವನ್ನು ಪಾಲಿಕೆಗೆ ದಾನ ಪತ್ರ ನೀಡಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಸಾರ್ವಜನಿಕರಿಗೊಂದು ಕಾನೂನು ಸರ್ಕಾರಿ ಕಟ್ಟಡಗಳಿಗೊಂದು ಕಾನೂನು ಎಂಬಂತೆ ಭಾಸವಾಗುತ್ತಿದೆ ಪಾಲಿಕೆ ಇಂಜಿನಿಯರ್ ಗಳು ಕಚೇರಿ ಯಲ್ಲಿ ಕುಳಿತು ಕಾಲ ಕಳೆಯುತ್ತಿದ್ದಾರೆ ಪುಟ್ ಪಾತ್ ಗಳನ್ನು ಆಕ್ರಮಿಸಿ ಕೊಂಡು ಕಟ್ಟಡ ನಿರ್ಮಾಣ ವಾದರೂ ಕೂಡ ಅತ್ತ ಕಡೆಗೆ ಸುಳಿಯುವುದಿಲ್ಲ 
ಈ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸಬೇಕಿದೆ ಎಂದು ಪಾಲಿಕೆಯ ಮಾಜಿ ಸದಸ್ಯರಾದ ಐಡಿಯಲ್ ಗೋಪಿಯವರು ತಿಳಿಸಿದ್ದಾರೆ

Comments