ಬ್ಲೂಮೂನ್ ವೈನ್ ಶಾಪ್ ಬಳಿ ಹಲ್ಲೆ : ಆರೋಪಿಗಳನ್ನು ಹಾಸನದ ಪುರದಮ್ಮ ಬಳಿ ಬಂಧಿಸಿದ ತುಂಗಾನಗರ ಪೊಲೀಸರು


 ಬ್ಲೂಮೂನ್ ವೈನ್ ಶಾಪ್ ಬಳಿ ಹಲ್ಲೆ : ಆರೋಪಿಗಳನ್ನು ಹಾಸನದ ಪುರದಮ್ಮ ಬಳಿ ಬಂಧಿಸಿದ ತುಂಗಾನಗರ ಪೊಲೀಸರು


ಶಿವಮೊಗ್ಗ : ಸಾಗರ ರಸ್ತೆಯಲ್ಲಿರುವ ಬ್ಲೂಮೂನ್‌ ವೈನ್ಸ್‌ ಷಾಪ್ ಬಳಿ ಹಾಡುಹಗಲೇ ನಡೆದ ಇಬ್ಬರ ಮೇಲಿನ ಹಲ್ಲೆಯ ಆರೋಪಿಗಳನ್ನು ಹಾಸನದ ತಣ್ಣಿರುಹಳ್ಳ ಮಾರ್ಗದ ಪುರದಮ್ಮ ದೇವಳದ ಬಳಿ ಬಂಧಿಸಿರುವ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸರು ಶಿವಮೊಗ್ಗಕ್ಕೆ ಕರೆ ತಂದಿದ್ದಾರೆ,

   ಈ ಮಾರಣಾಂತಿಕ ಹಲ್ಲೆಯು ಕ್ಷುಲ್ಲಕ ಕಾರಣವಾದರು ತಂದೆಯ ಮೇಲೆ ಹರಿಹಾಯ್ದು, ಕಪಾಳಕ್ಕೆ ಹೊಡೆದಿದ್ದರು ಎನ್ನುವ ಕಾರಣಕ್ಕೆ ಗಾಯಾಳು ಮಂಜುನಾಥ್ ಹಾಗೂ ಹರೀಶ್ ರವರುಗಳ ಮೇಲೆ ಸ್ನೇಹಿತರೊಂದಿಗೆ ಮುಗಿಬಿದ್ದು ರಾಡ್ ನಿಂದ ಹಲ್ಲೆ ನಡೆಸಿರುವುದಾಗಿ ತಿಳಿದು ಬಂದಿದೆ,

   ಹಲ್ಲೆ ನಡೆಸಿದ ಆರೋಪಿಗಳು ಗೋಪಾಳದ ಕೊರಮರ ಕೇರಿಯವರಾಗಿದ್ದು, ಈ ಹಲ್ಲೆಗೆ ಪ್ರಮುಖ ಕಾರಣಗಳು ಇದೇ ಸಂಗತಿಯೋ..? ಅಥವಾ ಅನ್ಯ ಮ್ಯಾಟರ್ ಏನಾದರೂ ಇದಿಯಾ ಎನ್ನುವುದು ತನಿಖೆ ಕೈಗೊಂಡಿರುವ ಟಪ್‌ಕಾಫ್ ಪಿ.ಐ ಗುರುರಾಜ್ ಕರ್ಕಿಯವರು ಹಾಗೂ ಅವರ ಸಿಬ್ಬಂದಿ ತಂಡವೇ ತಿಳಿಸಬೇಕಾಗಿದೆ.

  ಸಧ್ಯಕ್ಕೆ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಹರೀಶ್ ಹಾಗೂ ಮಂಜುನಾಥ್ ಪ್ರಾಣಾಪಯದಿಂದ ಪಾರಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

Comments